VIDEO: ಕಾಂಬೊ ಕ್ಯಾಚ್​… ರವೀಂದ್ರ ಜಡೇಜಾ-ಸಾಯಿ ಸುದರ್ಶನ್ ಜುಗಲ್‌ಬಂದಿ

Updated on: Jun 23, 2025 | 11:11 AM

England vs India, 1st Test: ಲೀಡ್ಸ್​​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲೊ 471 ರನ್ ಕಲೆಹಾಕಿತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ 465 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 90 ರನ್ ಕಲೆಹಾಕಿದೆ.

ಲೀಡ್ಸ್​ನ ಹೆಡಿಂಗ್ಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾದ ಫೀಲ್ಡರ್​ಗಳು 5 ಕ್ಯಾಚ್​ಗಳನ್ನು ಕೈಚೆಲ್ಲಿದ್ದರು. ಈ ಕಳಪೆ ಕ್ಷೇತ್ರರಕ್ಷಣೆಯ ನಡುವೆ ರವೀಂದ್ರ ಜಡೇಜಾ ಹಾಗೂ ಸಾಯಿ ಸುದರ್ಶನ್ ಜುಗಲ್‌ಬಂದಿಯೊಂದಿಗೆ ಬೌಂಡರಿ ಲೈನ್​ನಲ್ಲಿ ಕ್ಯಾಚ್​ವೊಂದು ಹಿಡಿದಿದಿದ್ದಾರೆ.

ಇಂಗ್ಲೆಂಡ್​ ಇನಿಂಗ್ಸ್​ನ 80ನೇ ಓವರ್​ನ 3ನೇ ಎಸೆತವನ್ನು ಜೇಮಿ ಸ್ಮಿತ್ ಲೆಗ್​ ಸೈಡ್​ನತ್ತ ಬಾರಿಸಿದ್ದರು. ಆದರೆ ಅಲ್ಲೇ ಬೌಂಡರಿ ಲೈನ್​ನಲ್ಲಿದ್ದ ರವೀಂದ್ರ ಜಡೇಜಾ ಚೆಂಡನ್ನು ಸರಿಯಾಗಿ ಗುರುತಿಸಿ ಕೈಯಲ್ಲಿ ಬಂಧಿಸಿದರು. ಇದರ ನಡುವೆ ನಿಯಂತ್ರಣ ತಪ್ಪಿದ ಜಡೇಜಾ ಬೌಂಡರಿ ಗೆರೆ ದಾಟಿದ್ದಾರೆ. ಆದರೆ ಅದಕ್ಕೂ ಮುನ್ನ ಚೆಂಡನ್ನು ಮತ್ತೋರ್ವ ಫೀಲ್ಡರ್ ಸಾಯಿ ಸುದರ್ಶನ್​ಗೆ ವರ್ಗಾಯಿಸುವಲ್ಲಿ ಯಶಸ್ವಿಯಾದರು.  ಈ ಮೂಲಕ ರವೀಂದ್ರ ಜಡೇಜಾ – ಸಾಯಿ ಸುದರ್ಶನ್ ಫೀಲ್ಡಿಂಗ್ ಜುಗಲ್​ಬಂದಿಯೊಂದಿಗೆ ಜೇಮಿ ಸ್ಮಿತ್​ಗೆ​ (40) ಪೆವಿಲಿಯನ್ ಹಾದಿ ತೋರಿಸಿದರು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲೊ 471 ರನ್ ಕಲೆಹಾಕಿತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ 465 ರನ್​ಗಳಿಸಿ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 90 ರನ್ ಕಲೆಹಾಕಿದೆ.

Loading...
Unable to load recommendations.
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More