RCB vs SRH: ಸೂಪರ್ ಮ್ಯಾನ್ ಫಿಲ್ ಸಾಲ್ಟ್ ಚಿರತೆಯ ಜಿಗಿತಕ್ಕೆ ದಂಗಾದ ಇಶಾನ್ ಕಿಶನ್

Updated on: Mar 28, 2026 | 9:39 PM

RCB Hero Phil Salt:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ಮೂರು ಅದ್ಭುತ ಕ್ಯಾಚ್‌ಗಳ ಮೂಲಕ ಎಲ್ಲರ ಗಮನ ಸೆಳೆದರು. ವಿಶೇಷವಾಗಿ 80 ರನ್ ಗಳಿಸಿದ್ದ ಇಶಾನ್ ಕಿಶನ್ ಅವರ ಕಠಿಣ ಕ್ಯಾಚ್ ಅನ್ನು ಸಾಲ್ಟ್ ಚಿರತೆಯಂತೆ ಜಿಗಿದು ಹಿಡಿದು ಪಂದ್ಯಕ್ಕೆ ತಿರುವು ನೀಡಿದರು. ಆರ್​ಸಿಬಿ ಪರ ಚೊಚ್ಚಲ ಪಂದ್ಯವಾಡಿದ ಅಭಿನಂದನ್ ಸಿಂಗ್ ಬೌಲಿಂಗ್‌ನಲ್ಲಿ ಈ ಐತಿಹಾಸಿಕ ಕ್ಯಾಚ್ ನಡೆಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಎಲ್ಲೆಲ್ಲಿಯೂ ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ಅವರದ್ದೇ ಅಬ್ಬರ. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಮೂರು ಅದ್ಭುತ ಕ್ಯಾಚ್​ಗಳನ್ನು ಹಿಡಿಯುವ ಮೂಲಕ ಇಡೀ ಮೈದಾನವೇ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅದರಲ್ಲೂ 80 ರನ್ ಬಾರಿಸಿ ಶತಕದತ್ತ ಮುನ್ನಗುತ್ತಿದ್ದ ಎಸ್​ಆರ್​ಎಚ್ ನಾಯಕ ಇಶಾನ್ ಕಿಶನ್ ಅವರ ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಸಾಲ್ಟ್, ಚಿರತೆಯಂತೆ ಎಗರಿ ಎಂದೇ ಕೈನಲ್ಲಿ ಹಿಡಿದರು. ಸ್ವತಃ ಇಶಾನ್ ಕಿಶನ್ ಅವರೇ ಸಾಲ್ಟ್ ಹಿಡಿದ ಈ ಅಸಾಧ್ಯವಾದ ಕ್ಯಾಚ್​ಗೆ ಒಂದು ಕ್ಷಣ ದಂಗಾಗಿ ನಿಂತರು.

ಆರ್​ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಅಭಿನಂದನ್ ಸಿಂಗ್, ಪಂದ್ಯದ 16ನೇ ಓವರ್ ಬೌಲ್ ಮಾಡಲು ಬಂದರು. ಈ ಓವರ್​ನ 5ನೇ ಎಸೆತವನ್ನು ಕಿಶನ್ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲೂ ಇದೇ ಪ್ರಯತ್ನ ಕಂಡುಬಂತು. ಅಭಿನಂದನ್ ಓವರ್​ನ ಕೊನೆಯ ಎಸೆತವನ್ನು ಫುಲ್ ಟಾಸ್ ಬೌಲ್ ಮಾಡಿದರು. ಇತ್ತ ಸ್ಟ್ರೈಕ್​ನಲ್ಲಿದ್ದ ಕಿಶನ್, ಪಾಯಿಂಟ್‌ ದಿಕ್ಕಿನ ಕಡೆಗೆ ಸ್ಲೈಸ್ ಮಾಡಿದರು. ಇತ್ತ ಫಿಲ್ ಸಾಲ್ಟ್ ಡೀಪ್ ಪಾಯಿಂಟ್‌ನಿಂದ ತನ್ನ ಬಲಕ್ಕೆ ವೇಗವಾಗಿ ಓಡಿ ಬಂದು ಚಿರತೆಯಂತೆ ಎಗರಿ ತನ್ನ ಬಲಗೈಯನ್ನು ಚಾಚಿ ಸ್ಲೈಡಿಂಗ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More