Video: ರಿಯಾಸಿ ಮೇಘಸ್ಫೋಟ, ಭೂಕುಸಿತ, ಮನೆ ಕುಸಿದು ಒಂದೇ ಕುಟುಂಬದ 7 ಮಂದಿ ಸಾವು

Updated on: Aug 30, 2025 | 11:03 AM

ಕಳೆದ ನಾಲ್ಕೈದು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಮೇಘಸ್ಫೋಟ ಸಂಭವಿಸಿದ್ದು, ಎಲ್ಲೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಯಾಸಿಯಲ್ಲಿ ಮೇಘಸ್ಫೋಟದ ಬಳಿಕ ಎಲ್ಲೆಡೆ ಭೂಕುಸಿತ ಸಂಭವಿಸಿ ಇಡೀ ಮನೆಯೇ ಕುಸಿದು ಬಿದ್ದು ಒಂದೇ ಮನೆಯ 7 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.ಭೂಕುಸಿತ ಸಂಭವಿಸಿದಾಗ ಕುಟುಂಬವು ನಿದ್ರಿಸುತ್ತಿತ್ತು ಎಂದು ಮಹೋರ್ ಶಾಸಕ ಮೊಹಮ್ಮದ್ ಖುರ್ಷಿದ್ ಹೇಳಿದ್ದಾರೆ. ಇದರಿಂದಾಗಿ ಇಡೀ ಮನೆ ಕುಸಿದು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ.ಗ್ರಾಮಸ್ಥರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಶವಗಳನ್ನು ಹೊರತೆಗೆದರು.

ರಿಯಾಸಿ, ಆಗಸ್ಟ್​ 30: ಕಳೆದ ನಾಲ್ಕೈದು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಮೇಘಸ್ಫೋಟ ಸಂಭವಿಸಿದ್ದು, ಎಲ್ಲೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಯಾಸಿಯಲ್ಲಿ ಮೇಘಸ್ಫೋಟದ ಬಳಿಕ ಎಲ್ಲೆಡೆ ಭೂಕುಸಿತ ಸಂಭವಿಸಿ ಇಡೀ ಮನೆಯೇ ಕುಸಿದು ಬಿದ್ದು ಒಂದೇ ಮನೆಯ 7 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.ಭೂಕುಸಿತ ಸಂಭವಿಸಿದಾಗ ಕುಟುಂಬವು ನಿದ್ರಿಸುತ್ತಿತ್ತು ಎಂದು ಮಹೋರ್ ಶಾಸಕ ಮೊಹಮ್ಮದ್ ಖುರ್ಷಿದ್ ಹೇಳಿದ್ದಾರೆ. ಇದರಿಂದಾಗಿ ಇಡೀ ಮನೆ ಕುಸಿದು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ.ಗ್ರಾಮಸ್ಥರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಶವಗಳನ್ನು ಹೊರತೆಗೆದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More