Video: ಕೆಳಗೆ ನೀರು, ಮೇಲೆ ಆಕಾಶ, ತುತ್ತ ತುದಿಯಲ್ಲಿ ನಿಂತೇ ಬಿಡ್ತು ರೋಲರ್ ಕೋಸ್ಟರ್, ಜೀವ ಕೈಯಲ್ಲಿ ಹಿಡಿದು ಕುಳಿತ ಜನ

Updated on: May 29, 2026 | 11:20 AM

ಅಮೆರಿಕದ ಟೆಕ್ಸಾಸ್​ನಲ್ಲಿ ರೋಲರ್ ಕೋಸ್ಟರ್ ತುತ್ತ ತುದಿ ತಲುಪುತ್ತಿದ್ದಂತೆ ಕೆಟ್ಟು ನಿಂತೇ ಬಿಟ್ಟಿತ್ತು. ಪರಿಣಾಮವಾಗಿ, ರೈಡ್‌ನಲ್ಲಿದ್ದ ಎಂಟು ಮಂದಿ ಪ್ರವಾಸಿಗರು ನೆಲದಿಂದ ಹಲವು ಮಹಡಿಗಳ ಎತ್ತರದಲ್ಲಿ, ನಡು ಆಕಾಶದಲ್ಲಿ ತಲೆಕೆಳಗಾಗಿ ತೂಗಾಡುವಂತಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಭೀಕರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು.ಅಷ್ಟು ಎತ್ತರದಲ್ಲಿದ್ದ ಪ್ರವಾಸಿಗರನ್ನು ತಲುಪಲು ಅಗ್ನಿಶಾಮಕ ದಳದವರು ಅತ್ಯಂತ ಉದ್ದವಾದ ಏಣಿಯಿರುವ ಟ್ರಕ್ ಅನ್ನು ಬಳಸಿದರು.

ಟೆಕ್ಸಾಸ್, ಮೇ 29: ಅಮೆರಿಕದ ಟೆಕ್ಸಾಸ್​ನಲ್ಲಿ ರೋಲರ್ ಕೋಸ್ಟರ್ ತುತ್ತ ತುದಿ ತಲುಪುತ್ತಿದ್ದಂತೆ ಕೆಟ್ಟು ನಿಂತೇ ಬಿಟ್ಟಿತ್ತು. ಪರಿಣಾಮವಾಗಿ, ರೈಡ್‌ನಲ್ಲಿದ್ದ ಎಂಟು ಮಂದಿ ಪ್ರವಾಸಿಗರು ನೆಲದಿಂದ ಹಲವು ಮಹಡಿಗಳ ಎತ್ತರದಲ್ಲಿ, ನಡು ಆಕಾಶದಲ್ಲಿ ತಲೆಕೆಳಗಾಗಿ ತೂಗಾಡುವಂತಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಭೀಕರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು.ಅಷ್ಟು ಎತ್ತರದಲ್ಲಿದ್ದ ಪ್ರವಾಸಿಗರನ್ನು ತಲುಪಲು ಅಗ್ನಿಶಾಮಕ ದಳದವರು ಅತ್ಯಂತ ಉದ್ದವಾದ ಏಣಿಯಿರುವ ಟ್ರಕ್ ಅನ್ನು ಬಳಸಿದರು.

ಏಣಿಯ ತುದಿಯಲ್ಲಿದ್ದ ಬಾಸ್ಕೆಟ್ ಮೂಲಕ ಸಿಬ್ಬಂದಿ ಪ್ರತಿಯೊಬ್ಬ ಸವಾರನನ್ನು ಅತ್ಯಂತ ಜಾಗರೂಕತೆಯಿಂದ ಕೆಳಗಿಳಿಸಲಾಯಿತು. ರೋಲರ್ ಕೋಸ್ಟರ್ ತಾಂತ್ರಿಕ ದೋಷದಿಂದಾಗಿ ಹಳಿ ತಪ್ಪಿತ್ತೇ ಅಥವಾ ವಿದ್ಯುತ್ ಕೈಕೊಟ್ಟಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹಲವು ಗಂಟೆಗಳ ಕಾಲ ಆಕಾಶದಲ್ಲೇ ಪ್ರಾಣ ಕೈಯಲ್ಲಿ ಹಿಡಿದು ಕುಳಿತಿದ್ದ ಪ್ರವಾಸಿಗರು ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More