ರಿಷಬ್ ಶೆಟ್ಟಿಯಿಂದ ರಾಜ್​ ಶೆಟ್ಟಿಗೆ ಮೋಸ ಆಯ್ತಾ? ಪ್ರಮೋದ್ ಶೆಟ್ಟಿಯದ್ದೂ ಇದೆ ಪಾಲು

Updated on: Aug 06, 2023 | 9:45 AM

ಇತ್ತೀಚೆಗೆ ನಡೆದ ‘ಟೋಬಿ’ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಆಗಮಿಸಿದ್ದರು. ಇವರ ಅನ್ಯೋನ್ಯತೆ ಬಗ್ಗೆ ಕೇಳಲಾಯಿತು. ಆಗ ರಿಷಬ್ ಹಾಗು ರಾಜ್ ಶೆಟ್ಟಿ ಕಿತ್ತಾಡಿಕೊಂಡಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ಹಾಗೂ ರಾಜ್ ಬಿ. ಶೆಟ್ಟಿ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನಡೆದ ‘ಟೋಬಿ’ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಆಗಮಿಸಿದ್ದರು. ಇವರ ಅನ್ಯೋನ್ಯತೆ ಬಗ್ಗೆ ಕೇಳಲಾಯಿತು. ಆಗ ರಿಷಬ್ ಹಾಗು ರಾಜ್ ಶೆಟ್ಟಿ (Raj B Shetty) ಕಿತ್ತಾಡಿಕೊಂಡಿದ್ದಾರೆ. ‘ನಮ್ಮ ನಿಜವಾದ ಫ್ರೆಂಡ್​ಶಿಪ್ ನೋಡಬೇಕು ಎಂದರೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ನೀವು ಬರಬೇಕು. ರಾಜ್ ಮೋಸ ಮಾಡ್ತಾರೆ’ ಎಂದು ರಿಷಬ್ ಆರೋಪಿಸಿದರು. ‘ನಾನು ಮೋಸ ಮಾಡಲ್ಲ. ಪ್ರಮೋದ್​ ಶೆಟ್ಟಿನ ಬೇಕಿದ್ರೆ ಕೇಳಿ’ ಎಂದರು ರಾಜ್. ‘ಅವನದ್ದೂ ಮೋಸವೇ’ ಎಂದು ರಿಷಬ್ ಉತ್ತರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More