ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ಗೆ ಪ್ರೀತಿಯಿಂದ ತಾತ ಎಂದು ಕರೆಯುವ ದರ್ಶನ್​

Updated on: Sep 12, 2023 | 6:02 PM

ರಾಕ್​ಲೈನ್​ ವೆಂಕಟೇಶ್​ ಮತ್ತು ದರ್ಶನ್​ ನಡುವೆ ಉತ್ತಮವಾದ ಒಡನಾಟ ಇದೆ. ‘ಕಾಟೇರ’ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ರಾಕ್​ಲೈನ್​ ವೆಂಕಟೇಶ್​ ಮಾತನಾಡಿದ್ದಾರೆ. ‘ದರ್ಶನ್​ ಅವರು ನನ್ನನ್ನು ತಾತ ಅಂತ ಕರೆಯುತ್ತಾರೆ. ನಾನು ಅವರನ್ನು ಮೊಮ್ಮಗನೇ ಎಂದು ಕರೆಯುತ್ತೇನೆ’ ಎಂದು ವೆಂಕಟೇಶ್​ ಹೇಳಿದ್ದಾರೆ.

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ‘ಕಾಟೇರ’ (Kaatera) ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್​ ಮತ್ತು ಆರಾಧನಾ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ನೂರನೇ ದಿನದ ಚಿತ್ರೀಕರಣದ ವೇಳೆ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಕೆಲವು ಇಂಟರೆಸ್ಟಿಂಗ್​ ವಿಚಾರಗಳ ಬಗ್ಗೆ ರಾಕ್​ಲೈನ್​ ವೆಂಕಟೇಶ್​ ಮಾತನಾಡಿದರು. ಅಚ್ಚರಿ ಏನೆಂದರೆ, ರಾಕ್​ಲೈನ್​ ವೆಂಕಟೇಶ್​ ಅವರನ್ನು ದರ್ಶನ್​ (Darshan) ಅವರು ತಾತಾ ಎಂದು ಕರೆಯುತ್ತಾರೆ. ಇಬ್ಬರ ನಡುವೆ ಅಷ್ಟು ಆತ್ಮೀಯತೆ ಇದೆ. ‘ದರ್ಶನ್​ ಅವರು ನನ್ನನ್ನು ತಾತ ಅಂತ ಕರೆಯುತ್ತಾರೆ. ನಾನು ಅವರನ್ನು ಮೊಮ್ಮಗನೇ ಎಂದು ಕರೆಯುತ್ತೇನೆ. ಅವರೇ ಈ ಕಥೆಯನ್ನು ಕೇಳುವಂತೆ ನನಗೆ ಹೇಳಿದರು. ಆಗ ತರುಣ್​ ಸುಧೀರ್​ ಬಂದು ಕಥೆ ಹೇಳಿದರು. ಅದು ನನಗೆ ಬಹಳ ಇಷ್ಟ ಆಯ್ತು’ ಎಂದು ರಾಕ್​ಲೈನ್​ ವೆಂಕಟೇಶ್​ (Rockline Venkatesh) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More