ನನಗೆ ಕುಟುಂಬವೇ ಇಲ್ಲ, ತೇಜಸ್ವಿ ನನ್ನನ್ನು ಹೊರ ಹಾಕಿದ್ರು, ಆರ್ಜೆಡಿ ತೊರೆದ ಬಳಿಕ ರೋಹಿಣಿ ಆಚಾರ್ಯ ಮೊದಲ ಪ್ರತಿಕ್ರಿಯೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಹೀನಾಯ ಸೋಲು ಅನುಭವಿಸಿದ ಬಳಿಕ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಕುಟುಂಬ ಹಾಗೂ ರಾಜಕೀಯ ಎರಡನ್ನೂ ತೊರೆದಿದ್ದರು. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ರೋಹಿಣಿ, ನನಗೆ ಕುಟುಂಬವೇ ಇಲ್ಲ, ತೇಜಸ್ವಿ ನನ್ನನ್ನು ಹೊರಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪಾಟ್ನಾದಲ್ಲಿ ತನ್ನ ಹೆತ್ತವರ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಆಚಾರ್ಯ, ನನಗೆ ಕುಟುಂಬವಿಲ್ಲ, ನೀವು ಏನಾದರೂ ಕೇಳುವುದಿದ್ದರೆ ಈಗ ಸಂಜಯ್, ರಮೀಜ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೇಳಿ ಎಂದು ಹೇಳಿದ್ದಾರೆ.
ನವದೆಹಲಿ, ನವೆಂಬರ್ 16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಹೀನಾಯ ಸೋಲು ಅನುಭವಿಸಿದ ಬಳಿಕ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಕುಟುಂಬ ಹಾಗೂ ರಾಜಕೀಯ ಎರಡನ್ನೂ ತೊರೆದಿದ್ದರು. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ರೋಹಿಣಿ, ನನಗೆ ಕುಟುಂಬವೇ ಇಲ್ಲ, ತೇಜಸ್ವಿ ನನ್ನನ್ನು ಹೊರಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪಾಟ್ನಾದಲ್ಲಿ ತನ್ನ ಹೆತ್ತವರ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಆಚಾರ್ಯ, ನನಗೆ ಕುಟುಂಬವಿಲ್ಲ, ನೀವು ಏನಾದರೂ ಕೇಳುವುದಿದ್ದರೆ ಈಗ ಸಂಜಯ್, ರಮೀಜ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೇಳಿ ಎಂದು ಹೇಳಿದ್ದಾರೆ.
ಕುಟುಂಬದಲ್ಲಿ ಪ್ರಶ್ನೆಗಳನ್ನು ಎತ್ತುವ ಜನರನ್ನು ಹೊರಗೆಸೆದು ಚಪ್ಪಲಿಯಿಂದ ಹೊಡೆಯಲಾಗುತ್ತದೆ ಎಂದು ಅವರು ಹೇಳಿದರು.ಅವರು ಚುನಾವಣಾ ಸೋಲಿನ ಹೊಣೆ ಹೊತ್ತುಕೊಳ್ಳಲು ತಯಾರಿಲ್ಲ, ನಾನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹೊರಹಾಕಿದ್ದಾರೆ ಎಂದು ರೋಹಿಣಿ ಹೇಳಿದ್ದಾರೆ. ರೋಹಿಣಿ ಆಚಾರ್ಯ ಅವರ ಹೇಳಿಕೆಗಳು ಚುನಾವಣಾ ಸೋಲಿನ ನಂತರ ಆರ್‌ಜೆಡಿಯೊಳಗಿನ ಉದ್ವಿಗ್ನತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ