IND vs BAN, ICC World Cup: ಬಾಂಗ್ಲಾ ಟಾರ್ಗೆಟ್: ಮುಂದಿನ ಪಂದ್ಯಕ್ಕಾಗಿ ಪುಣೆ ತಲುಪಿದ ಟೀಮ್ ಇಂಡಿಯಾ ಆಟಗಾರರು

IND vs BAN, ICC World Cup: ಬಾಂಗ್ಲಾ ಟಾರ್ಗೆಟ್: ಮುಂದಿನ ಪಂದ್ಯಕ್ಕಾಗಿ ಪುಣೆ ತಲುಪಿದ ಟೀಮ್ ಇಂಡಿಯಾ ಆಟಗಾರರು

Vinay Bhat
|

Updated on:Oct 16, 2023 | 8:24 AM

Team India Reach Pune: ರೋಹಿತ್ ಪಡೆ ಮುಂದಿನ ಪಂದ್ಯಕ್ಕಾಗಿ ಪುಣೆಗೆ ತಲುಪಿದೆ. ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 19 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂನಲ್ಲಿ ತನ್ನ ನಾಲ್ಕನೇ ಪಂದ್ಯ ಆಡಲಿದೆ. ಇದಕ್ಕಾಗಿ ಟೀಮ್ ಇಂಡಿಯಾದ ಎಲ್ಲ ಆಟಗಾರರು ಪುಣೆಗೆ ತಲುಪಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ, ಬಳಿಕ ಅಫ್ಘಾನಿಸ್ತಾನ ಹಾಗೂ ಶನಿವಾರ ಪಾಕಿಸ್ತಾನ ವಿರುದ್ಧ ಜಯ ಸಾಧಿಸುವ ಮೂಲಕ ಅಮೋಘ ಫಾರ್ಮ್​ನಲ್ಲಿದೆ. ಟೀಮ್ ಇಂಡಿಯಾ ಆಡಿದ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಗೆಲುವು ಸಾಧಿಸಿ ಒಟ್ಟು ಆರು ಅಂಕ ಸಂಪಾದಿಸಿದೆ. ಸದ್ಯ ರೋಹಿತ್ ಪಡೆ ಮುಂದಿನ ಪಂದ್ಯಕ್ಕಾಗಿ ಪುಣೆಗೆ ತಲುಪಿದೆ. ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 19 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂನಲ್ಲಿ ತನ್ನ ನಾಲ್ಕನೇ ಪಂದ್ಯ ಆಡಲಿದೆ. ಇದಕ್ಕಾಗಿ ಟೀಮ್ ಇಂಡಿಯಾದ ಎಲ್ಲ ಆಟಗಾರರು ಪುಣೆಗೆ ತಲುಪಿದ್ದಾರೆ. ಬಿಸಿಸಿಐ ಈ ಬಗ್ಗೆ ವಿಡಿಯೋ ಹಂಚಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 16, 2023 08:23 AM