ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ

Updated on: Mar 05, 2025 | 1:45 PM

Sadhu Kokila: ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದ್ದಾರೆ. ಈಗ ತೆಲುಗಿನಲ್ಲಿ ಟಾಪ್​ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್​ಗೆ ಆಶ್ಚರ್ಯ ತಂದಿತು. ದೇವಿಶ್ರೀ ಪ್ರಸಾದ್ ಬೆಂಗಳೂರು ಫಿಲಂ ಫೆಸ್ಟ್​ಗೆ ಅತಿಥಿಯಾಗಿ ಆಗಮಿಸಿದ್ದರು.

ಕನ್ನಡ ಸಿನಿಮಾ ಪ್ರೇಕ್ಷಕರಿಗೆ, ಪರಭಾಷೆಯವರಿಗೂ ಸಹ ಸಾಧುಕೋಕಿಲ ಹಾಸ್ಯನಟನಾಗಿ ಬಹಳ ಜನಪ್ರಿಯ. ಆದರೆ ಅವರೊಬ್ಬ ಬಹಳ ಒಳ್ಳೆಯ ಸಂಗೀತ ನಿರ್ದೇಶಕ. ಹಲವಾರು ನೆನಪುಳಿಯುವ ಹಾಡುಗಳನ್ನು ಸಾಧುಕೋಕಿಲ ನೀಡಿದ್ದಾರೆ. ನಿನ್ನೆಯಷ್ಟೆ ಬೆಂಗಳೂರು ಫಿಲಂ ಫೆಸ್ಟ್​ಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಆಗಮಿಸಿದ್ದರು. ಈ ವೇಳೆ ತಮ್ಮ ಹಾಗೂ ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದರು. ಈಗ ತೆಲುಗಿನಲ್ಲಿ ಟಾಪ್​ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್​ಗೆ ಆಶ್ಚರ್ಯ ತಂದಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More