Samsung Galaxy Watch Ultra: ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್

|

Updated on: Jul 22, 2024 | 2:04 PM

ಸ್ಯಾಮ್​ಸಂಗ್ ಗ್ಯಾಲಕ್ಸಿ ವಾಚ್ 7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್​ವಾಚ್​ಗಳನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್​ ಫೀಚರ್ಸ್ ಜತೆಗೆ ಫಿಟ್ನೆಸ್, ಆ್ಯಕ್ಟಿವಿಟಿ ಮತ್ತು ಆರೋಗ್ಯದ ಕಾಳಜಿ ಮಾಡಬಯಸುವವರಿಗೆ ನೂತನ ವಾಚ್ ಸಹಕಾರಿಯಾಗಲಿದೆ.

ಪ್ರೀಮಿಯಂ ಸ್ಮಾರ್ಟ್​ವಾಚ್ ಸರಣಿಯಲ್ಲಿ ಸ್ಯಾಮ್​ಸಂಗ್ ಹೊಸ ಎಂಟ್ರಿಯೊಂದನ್ನು ಪರಿಚಯಿಸಿದೆ. ಆ್ಯಪಲ್ ವಾಚ್ ಅಲ್ಟ್ರಾ ಮಾದರಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಬೆನ್ನಲ್ಲೇ ಸ್ಯಾಮ್​ಸಂಗ್ ಗ್ಯಾಲಕ್ಸಿ ವಾಚ್ 7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್​ವಾಚ್​ಗಳನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್​ ಫೀಚರ್ಸ್ ಜತೆಗೆ ಫಿಟ್ನೆಸ್, ಆ್ಯಕ್ಟಿವಿಟಿ ಮತ್ತು ಆರೋಗ್ಯದ ಕಾಳಜಿ ಮಾಡಬಯಸುವವರಿಗೆ ನೂತನ ವಾಚ್ ಸಹಕಾರಿಯಾಗಲಿದೆ. ವಾಟರ್ ಪ್ರೂಫ್ ಮತ್ತು ವಿವಿಧ ಸ್ಪೋರ್ಟ್ಸ್​ ಮೋಡ್, ಆಕರ್ಷಕ ವಿನ್ಯಾಸ, ಎಮರ್ಜೆನ್ಸಿ ಸೈರನ್, ಕ್ವಿಕ್ ಬಟನ್ ಇರುವ ನೂತನ ವಾಚ್ ಫಿಟ್ನೆಸ್ ಪ್ರಿಯರ ಮನಗೆಲ್ಲಲಿದೆ. ಹೊಸ ವಾಚ್ ಬೆಲೆ ಮತ್ತು ಇತರ ಡೀಟೇಲ್ಸ್ ಇಲ್ಲಿದೆ.