‘ಬಿಗ್ ಬಾಸ್ ಮನೆ ಈಗಲೂ ನಮ್ಮನ್ನು ಕಾಡುತ್ತದೆ’; ಹೊರಗೆ ಬಂದು ಅನುಭವ ಹೇಳಿಕೊಂಡ ಸಂಗೀತಾ ಶೃಂಗೇರಿ

Updated on: Jan 31, 2024 | 11:31 AM

ಸ್ಪರ್ಧಿಗಳು ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಬೆಳಿಗ್ಗೆ ಬರುವ ಬಿಗ್ ಬಾಸ್ ಸಾಂಗ್, ಮೈಕ್ ಹಾಕಿಕೊಂಡು ಓಡಾಡುವುದು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾರೆ. ಈಗ ಸಂಗೀತಾ ಶೃಂಗೇರಿಗೂ ಅದೇ ರೀತಿ ಆಗಿದೆ.

‘ಬಿಗ್ ಬಾಸ್’ ಮನೆಯಲ್ಲಿ ಇರುವಾಗ ಯಾವಾಗ ಹೊರಗೆ ಬರುತ್ತೇವೆ ಎಂದು ಸ್ಪರ್ಧಿಗಳಿಗೆ ಅನ್ನಿಸುತ್ತಿರುತ್ತದೆ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಆ ಮನೆಯನ್ನು ಸ್ಪರ್ಧಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆ ಬರುವ ಬಿಗ್ ಬಾಸ್ ಸಾಂಗ್, ಮೈಕ್ ಹಾಕಿಕೊಂಡು ಓಡಾಡುವುದು ಎಲ್ಲವನ್ನೂ ಸ್ಪರ್ಧಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಈಗ ಸಂಗೀತಾ ಶೃಂಗೇರಿಗೆ (Sangeetha Sringeri) ಹಾಗೆಯೇ ಆಗಿದೆ. ‘ಬಿಗ್ ಬಾಸ್ ಮನೆ ಈಗಲೂ ಕಾಡುತ್ತಿದೆ. ಸಾಂಗ್ ಬಂದಿಲ್ಲ ಎನ್ನುವ ಕಾರಣಕ್ಕೆ ಇನ್ನೂ ಬೆಳಿಗ್ಗೆ ಆಗೇ ಇಲ್ಲ ಎಂದು ಅನಿಸುತ್ತಿತ್ತು. ಈಗ ನಮ್ಮನ್ನು ಯಾರೂ ನಾಮಿನೇಟ್ ಮಾಡುವವರು ಇಲ್ಲ’ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಸಂಗೀತಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More