ಸುದೀಪ್ರ ‘ರನ್ನ’ ಸಿನಿಮಾ ಸಮಯದ 2.50 ಕೋಟಿ ರೂ. ವಿವಾದ ನೆನಪಿಸಿದ ಸಾರಾ ಗೋವಿಂದು
Sa Ra Govindu: ಕುಮಾರ್ ಹಾಗೂ ಸುದೀಪ್ ನಡುವೆ ಎದ್ದಿರುವ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿರುವ ಸಾರಾ ಗೋವಿಂದು, 'ರನ್ನ' ಬಿಡುಗಡೆ ಸಂದರ್ಭ ಎದ್ದಿದ್ದ 2.50 ಕೋಟಿ ರೂಪಾಯಿ ಬಾಕಿ ವಿವಾದ ನೆನಪಿಸಿಕೊಂಡಿದ್ದಾರೆ.
ಸುದೀಪ್ (Sudeep) ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ (MN Kumar) ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರವಾಗಿ ನಟ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದು, ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ 10 ಕೋಟಿ ರೂಪಾಯಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ಧ ನಿರ್ಮಾಪಕ ಕುಮಾರ್ ಫಿಲಂ ಚೇಂಬರ್ ಎದುರು ಧರಣಿ ಮಾಡುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಸಹ ಎಂಟ್ರಿ ಆಗಿದ್ದು, ಸುದೀಪ್ ವಾಣಿಜ್ಯ ಮಂಡಳಿಗೆ ಆಗಮಿಸಿ ಮಾತು-ಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ. ಈ ಸಮಯದಲ್ಲಿ ಸುದೀಪ್ರ ‘ರನ್ನ’ ಸಿನಿಮಾದ ಸಮಯದಲ್ಲಿ ಆಗಿದ್ದ 2.50 ಕೋಟಿ ರೂ ಬಾಕಿ ವಿವಾದವನ್ನೂ ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 18, 2023 11:11 PM