ರವಿ ಸಿಂಹ ರಾಶಿಯಲ್ಲಿ, ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Sep 12, 2026 | 6:42 AM

ಟಿವಿ9 ಡಿಜಿಟಲ್ ವಾಹಿನಿಯ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ಅವರು 12-09-2026 ರ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಶನಿವಾರದ ವಿಶೇಷ, ಪಂಚಾಂಗದ ವಿವರಗಳು, ರಾಹುಕಾಲ, ಶುಭಕಾಲ ಹಾಗೂ ಮೇಷ ಮತ್ತು ವೃಷಭ ರಾಶಿಗಳ ಕುರಿತು ಪ್ರಮುಖ ಮಾಹಿತಿಗಳನ್ನು ನೀಡಿದ್ದಾರೆ. ಈ ದಿನದ ಗ್ರಹಗಳ ಸ್ಥಾನ ಹಾಗೂ ಅವುಗಳ ಪ್ರಭಾವದ ಬಗ್ಗೆ ತಿಳಿಯಿರಿ.

ಇಂದು 2026 ರ ಸೆಪ್ಟೆಂಬರ್ 12, ಶನಿವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಶುಕ್ಲ ಪಕ್ಷದ ಪಾಡ್ಯ, ಉತ್ತರಾ ನಕ್ಷತ್ರ, ಶುಭ ಯೋಗ, ಬವಕರಣ ಇದ್ದು, ರಾಹುಕಾಲವು ಬೆಳಗ್ಗೆ 9 ಗಂಟೆ 12 ನಿಮಿಷದಿಂದ 10 ಗಂಟೆ 44 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲ ಮಧ್ಯಾಹ್ನ 1 ಗಂಟೆ 47 ನಿಮಿಷದಿಂದ 3 ಗಂಟೆ 19 ನಿಮಿಷದ ತನಕ ಇರಲಿದೆ. ಭಾದ್ರಪದ ಮಾಸವು ಇಂದಿನಿಂದ ಪ್ರಾರಂಭವಾಗಿ ಅಕ್ಟೋಬರ್ 9 ರವರೆಗೆ ಇರುತ್ತದೆ. ರವಿ ಸಿಂಹ ರಾಶಿಯಲ್ಲಿ, ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. 12 ರಾಶಿಗಳ ಈ ದಿನದ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More