ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
Haryana vs Bengal: 294 ರನ್ಗಳ ಗುರಿ ಪಡೆದ ಹರ್ಯಾಣ ತಂಡವನ್ನು ಮತ್ತೊಮ್ಮೆ ಕಟ್ಟಿ ಹಾಕುವಲ್ಲಿ ಶಹಬಾಝ್ ಅಹ್ಮದ್ ಯಶಸ್ವಿಯಾದರು. ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 8 ಓವರ್ಗಳನ್ನು ಎಸೆದ ಶಹಬಾಝ್ 38 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ ಹರ್ಯಾಣ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 105 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಬೆಂಗಾಲ್ ತಂಡವು 188 ರನ್ಗಳ ಭರ್ಜರಿ ಜಯ ಸಾಧಿಸಿದೆ.
ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಶಹಬಾಝ್ ಅಹ್ಮದ್ ಬರೋಬ್ಬರಿ 11 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 193 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಹರ್ಯಾಣ ತಂಡವನ್ನು ಕೇವಲ 100 ರನ್ಗಳಿಗೆ ಆಲೌಟ್ ಮಾಡುವಲ್ಲಿ ಶಹಬಾಝ್ ಅಹ್ಮದ್ ಪ್ರಮುಖ ಪಾತ್ರವಹಿಸಿದರು.
ಪ್ರಥಮ ಇನಿಂಗ್ಸ್ನಲ್ಲಿ 11.1 ಓವರ್ಗಳನ್ನು ಎಸೆದ ಶಹಬಾಝ್ ಅಹ್ಮದ್ ಕೇವಲ 42 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಬೆಂಗಾಲ್ ತಂಡವು 200 ರನ್ಗಳಿಸಲಷ್ಟೇ ಶಕ್ತರಾದರು.
ಅದರಂತೆ 294 ರನ್ಗಳ ಗುರಿ ಪಡೆದ ಹರ್ಯಾಣ ತಂಡವನ್ನು ಮತ್ತೊಮ್ಮೆ ಕಟ್ಟಿ ಹಾಕುವಲ್ಲಿ ಶಹಬಾಝ್ ಅಹ್ಮದ್ ಯಶಸ್ವಿಯಾದರು. ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 8 ಓವರ್ಗಳನ್ನು ಎಸೆದ ಶಹಬಾಝ್ 38 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ ಹರ್ಯಾಣ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 105 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಬೆಂಗಾಲ್ ತಂಡವು 188 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದ ಎರಡು ಇನಿಂಗ್ಸ್ಗಳ ಮೂಲಕ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.