ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ

Updated on: Jul 12, 2025 | 6:58 AM

ಜುಲೈ 13 ರಿಂದ ವಕ್ರಶನಿಯ ನವೆಂಬರ್ 27 ರ ವರೆಗೆ ವಕ್ರ ಶನಿ ಇರಲಿದ್ದು, ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಏನಾಗಲಿದೆ? ಅದಕ್ಕೆ ಪರಿಹಾರಗಳೇನು? ವಕ್ರ ಶನಿಯ ನಕಾರಾತ್ಮಕ ಪ್ರಭಾವ ಕಡಿಮೆ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಡಾ. ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ವಕ್ರಶನಿಯ 138 ದಿನಗಳ ಸಂಚಾರದಿಂದ 12 ರಾಶಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ಮುಂತಾದ ರಾಶಿಗಳಿಗೆ ಮಿಶ್ರ ಫಲ, ತುಲಾ ಮತ್ತು ಮಕರ ರಾಶಿಗಳಿಗೆ ಶುಭ ಫಲ, ಮತ್ತು ಕೆಲವು ರಾಶಿಗಳಿಗೆ ಜಾಗ್ರತೆ ಅಗತ್ಯ ಎಂದು ತಿಳಿಸಲಾಗಿದೆ. ಶನಿದೇವರ ಆರಾಧನೆ ಮತ್ತು ದಾನಧರ್ಮಗಳ ಮಹತ್ವವನ್ನು ಕೂಡ ವಿವರಿಸಲಾಗಿದೆ. ಟಿವಿ9 ಕನ್ನಡದ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರುಜಿ ಅವರು ವಕ್ರ ಶನಿಯ ಪ್ರಭಾವದ ಬಗ್ಗೆ ಮಾಹಿತಿ ನೀಡಿದ್ದಾರೆ. ಜುಲೈ 13, 2025 ರಿಂದ ನವೆಂಬರ್ 27, 2025 ರವರೆಗೆ 138 ದಿನಗಳ ಕಾಲ ಶನಿ ಮೀನ ರಾಶಿಯಲ್ಲಿ ವಕ್ರಗತಿಯಲ್ಲಿ ಸಂಚರಿಸಲಿದೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More