ಶಿರೋಳ್ಳಿಯ ಬಿಜೆಪಿ ಕಾರ್ಯಕರ್ತ ಮೈತುಂಬಾ ಸಾಲಮಾಡಿಕೊಂಡ ಕಾರಣ ಸಾವಿಗೆ ಶರಣಾಗಿದ್ದಾನೆ: ಪ್ರಿಯಾಂಕ್ ಖರ್ಗೆ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪಾಟೀಲ್ ಮೃತ ಶಿವಕುಮಾರ್ ತನಗೆ ಪರಿಚಯವೇ ಇರಲಿಲ್ಲ ಅಂತ ಹೇಳಿದ್ದಾರೆ ಎಂದ ಖರ್ಗೆ ಪ್ರಕರಣದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಘಟನೆ ನಡೆದ 24 ಗಂಟೆಯೊಳಗೆ ಅದನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಹೇಳಿದರು. ಬೆಳಗಾವಿಯ ಗುತ್ತೇದಾರ ಸಂತೋಷ್ ಪಾಟೀಲ್ ಅತ್ಮಹತ್ಯೆ ಪ್ರಕರಣವೇ ಬೇರೆ ಈ ಪ್ರಕರಣವೇ ಬೇರೆ ಎಂದು ಸಚಿವ ಹೇಳಿದರು.
ಕಲಬುರಗಿ: ನಗರದಲ್ಲಿಂದು ಸುದ್ದಿ ಗೋಷ್ಟಿ ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಶಿರೋಳ್ಳಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿಯ (Shivakumar Pujari) ಆತ್ಮಹತ್ಯೆಗೆ ಅವರು ಮೈ ತುಂಬಾ ಸಾಲ ಮಾಡಿಕೊಂಡಿದ್ದೇ ಕಾರಣವೆಂದು ಹೇಳಿದರು. ಮೃತನ ಕುಟುಂಬದವರೇ, ಇದ್ದ ಎರಡೆಕರೆ ಜಮೀಮು ಮಾರಿಕೊಂಡು 8-10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಮತ್ತು ಪ್ರಕರಣವನ್ನು ರೈತ ಆತ್ಮಹತ್ಯೆ ಪ್ರಕರಣ ಅಂತ ಪರಿಗಣಸಿ ಸರ್ಕಾರ ಪರಿಹಾರ ನೀಡಬೇಕೆಂದು ಹೇಳಿರುವಾಗ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ (Dr Sharan Prakash Patil) ಅವರನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪಾಟೀಲ್ ಮೃತ ಶಿವಕುಮಾರ್ ತನಗೆ ಪರಿಚಯವೇ ಇರಲಿಲ್ಲ ಅಂತ ಹೇಳಿದ್ದಾರೆ ಎಂದ ಖರ್ಗೆ ಪ್ರಕರಣದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಘಟನೆ ನಡೆದ 24 ಗಂಟೆಯೊಳಗೆ ಅದನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಹೇಳಿದರು. ಬೆಳಗಾವಿಯ ಗುತ್ತೇದಾರ ಸಂತೋಷ್ ಪಾಟೀಲ್ ಅತ್ಮಹತ್ಯೆ ಪ್ರಕರಣವೇ ಬೇರೆ ಈ ಪ್ರಕರಣವೇ ಬೇರೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ