‘ಹನುಮಾನ್’ ಸಿನಿಮಾ ನೋಡಿ ಶಿವಣ್ಣ ಹೇಳಿದ್ದು ಹೀಗೆ

Updated on: Jan 16, 2024 | 11:50 PM

Hanuman: ಎಲ್ಲೆಡೆ ಸದ್ದು ಮಾಡುತ್ತಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಹನುಮಾನ್’ ಅನ್ನು ಶಿವರಾಜ್ ಕುಮಾರ್ ವೀಕ್ಷಿಸಿ, ಸಿನಿಮಾದ ಬಗ್ಗೆ ಮಾತನಾಡಿದರು,

ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿರುವ ‘ಹನುಮಾನ್’ (Hanuman) ಸಿನಿಮಾ ಸದ್ದು ಮಾಡುತ್ತಿದೆ. ಕಡಿಮೆ ಬಜೆಟ್​ನಲ್ಲಿ ಉತ್ತಮ ಗುಣಮಟ್ಟದ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳನ್ನು ಬಳಸಿ ಕತೆಯನ್ನೂ ಕೊತೆಗೂಡಿಸಿಕೊಂಡು ಒಳ್ಳೆಯ ಸಿನಿಮಾ ಮಾಡಿರುವುದಾಗಿ ವಿಮರ್ಶಕರು ಕೊಂಡಾಡಿದ್ದಾರೆ. ಇಂದು (ಜನವರಿ 16) ಶಿವರಾಜ್ ಕುಮಾರ್, ‘ಹನುಮಾನ್’ ಸಿನಿಮಾ ವೀಕ್ಷಿಸಿದರು. ಗೀತಾ ಶಿವರಾಜ್ ಕುಮಾರ್ ಜೊತೆಗೂಡಿ ಸಿನಿಮಾ ನೋಡಿದ ಶಿವಣ್ಣ, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಶಕ್ತಿಧಾಮದ ಮಕ್ಕಳಿಗೆ ‘ಹನುಮಾನ್’ ಸಿನಿಮಾ ತೋರಿಸುವುದಾಗಿಯೂ ಹೇಳಿದರು. ತಮ್ಮ ಕುಟುಂಬಕ್ಕೂ ಆಂಜನೇಯ ಸ್ವಾಮಿಗೂ ಇರುವ ಕನೆಕ್ಷನ್ ಬಗ್ಗೆಯೂ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More