Shivarajkumar: ಶಿವಣ್ಣನ ಐಷಾರಾಮಿ ಕಾರಿನ ಸುತ್ತ ಅಭಿಮಾನಿಗಳ ದಂಡು; ನೂಕುನಗ್ಗುಲಿನಲ್ಲೂ ಸೆಲ್ಫಿ ನೀಡಿ ಮುಂದೆ ಸಾಗಿದ ನಟ

Updated on: May 08, 2023 | 9:45 PM

ಶಿವರಾಜ್​ಕುಮಾರ್​ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​. ಅವರ ಎನರ್ಜಿ ಕಂಡು ವಾವ್​ ಎನ್ನದವರಿಲ್ಲ. ಅದಕ್ಕೆ ಲೇಟೆಸ್ಟ್​ ಉದಾಹರಣೆಯಂತಿದೆ ಈ ವಿಡಿಯೋ.

‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ (Shivarajkumar) ಅವರು ಸದಾ ಆ್ಯಕ್ಟೀವ್​ ಆಗಿರುತ್ತಾರೆ. ವಯಸ್ಸು 60 ದಾಟಿದ್ದರೂ ಅವರು ಹದಿಹರೆಯದ ಯುವಕನಂತೆ ಉತ್ಸಾಹದಿಂದ ಇರುತ್ತಾರೆ. ಅವರು ಎಲ್ಲೇ ಕಾಣಿಸಿದರೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇಂದು (ಮೇ 8) ಅವರು ಬೆಂಗಳೂರಿನಲ್ಲಿ ತಮ್ಮ ಐಷಾರಾಮಿ ಕಾರಿನಲ್ಲಿ ತೆರಳುವಾಗ ಅಭಿಮಾನಿಗಳು (Shivarajkumar Fans) ಮತ್ತಿಕೊಂಡರು. ಭಾರಿ ನೂಕುನುಗ್ಗುಲಿನಲ್ಲೂ ಕೆಲವರು ಸೆಲ್ಫಿಗಾಗಿ ಹರಸಾಹಸಪಟ್ಟರು. ಆ ಜನಜಂಗುಳಿಯಲ್ಲೂ ಅಭಿಮಾನಿಗಳ ಜೊತೆ ಶಿವಣ್ಣ ಸೆಲ್ಫಿಗೆ ಪೋಸ್​ ನೀಡಿ ಮುಂದೆ ಸಾಗಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More