‘ರಾಜಕೀಯಕ್ಕೆ ಏಕೆ ಸ್ಪರ್ಧಿಸಲ್ಲ?’; ನೇರವಾಗಿ ಉತ್ತರಿಸಿದ ಶಿವರಾಜ್​ಕುಮಾರ್

Updated on: Mar 28, 2024 | 12:10 PM

ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಪತಿ ಶಿವರಾಜ್​ಕುಮಾರ್ ಕೂಡ ಸಾತ್ ನೀಡುತ್ತಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಪತ್ನಿ ಗೀತಾ ಶಿವರಾಜ್​ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಪತಿ ಶಿವರಾಜ್​ಕುಮಾರ್ ಕೂಡ ಸಾತ್ ನೀಡುತ್ತಿದ್ದಾರೆ. ಪತ್ನಿಯ ಜೊತೆ ಹೋಗಿ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಶಿವರಾಜ್​ಕುಮಾರ್ ಅವರು ಚುನಾವಣೆಗೆ ಏಕೆ ನಿಲ್ಲುವುದಿಲ್ಲ ಅನ್ನೋದು ಅನೇಕರ ಪ್ರಶ್ನೆ ಇದಕ್ಕೆ ಅವರು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುವಾಗ ಉತ್ತರಿಸಿದ್ದಾರೆ. ‘ನನಗೆ ರಾಜಕೀಯ ಗೊತ್ತಿಲ್ಲ. ನಾನು ಅಲ್ಲಿ-ಇಲ್ಲಿ ಸೇವೆ ಮಾಡ್ತೀನಿ. ಗೀತಾ ಅವರ ಬ್ಲಡ್​ನಲ್ಲಿ ರಾಜಕೀಯ ಬ್ಲಡ್ ಇದೆ’ ಎಂದಿದ್ದಾರೆ ಶಿವಣ್ಣ. ಶಿವರಾಜ್​ಕುಮಾರ್ ಅವರನ್ನು ನೋಡಲು ಅನೇಕರು ನೆರೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 28, 2024 12:09 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More