Karnataka Assembly Polls 2023; ಸಿದ್ದರಾಮಯ್ಯ ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿ, ಅವರು ಬಳಸುವ ಭಾಷೆ ಹಿರಿತನಕ್ಕೆ ಅನುಗುಣವಾಗಿರಬೇಕು: ವಿ ಸೋಮಣ್ಣ

Updated on: Apr 21, 2023 | 10:46 AM

ಅವರೀಗ ವಿರೋಧ ಪಕ್ಷದ ನಾಯಕನೂ ಅಲ್ಲ, ಮತ್ತು ತಾನು ಮಂತ್ರಿಯೂ ಅಲ್ಲ, ತಮ್ಮಿಬ್ಬರಲ್ಲಿ ಯಾರು ಹೆಚ್ಚು ಸಮರ್ಥರು ಅನ್ನೋದನ್ನು ಜನ ನಿರ್ಧರಿಸುತ್ತಾರೆ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದರು.

ಚಾಮರಾಜನಗರ: ವರುಣಾ ಕ್ಷೇತ್ರದಲ್ಲಿ ಬೆಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ (Siddaramaiah) ನಡುವೆ ಮಾತಿನ ಕಾಳಗ ಶುರುವಾಗಿದೆ. ಸಿದ್ದರಾಮಯ್ಯ ಆಕ್ರಾಮಕ ಶೈಲಿಯ ಭಾಷೆ ಪ್ರಯೋಗಿಸಿದರೆ ಸೋಮಣ್ಣ ತಮ್ಮ ಎಂದಿನ ಸೌಮ್ಯ ಭಾಷೆಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಚಾಮರಾಜನಗರದಲ್ಲಿ (Chamarajanagar) ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಣ್ಣ, ‘ಸಿದ್ದರಾಮಯ್ಯನವರನ್ನು ನಾನು ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿಯಾಗಿ ನೋಡುತ್ತೇನೆ. ಅವರು ಇನ್ನಾದರೂ ಅವನ್ಯಾರು, ಇವನ್ಯಾರು ಅಂತ ಆಡೋದನ್ನು ನಿಲ್ಲಿಸಬೇಕು,’ ಎಂದು ಹೇಳಿದರು. ಅವರೀಗ ವಿರೋಧ ಪಕ್ಷದ ನಾಯಕನೂ ಅಲ್ಲ, ಮತ್ತು ತಾನು ಮಂತ್ರಿಯೂ ಅಲ್ಲ, ತಮ್ಮಿಬ್ಬರಲ್ಲಿ ಯಾರು ಹೆಚ್ಚು ಸಮರ್ಥರು ಅನ್ನೋದನ್ನು ಜನ ನಿರ್ಧರಿಸುತ್ತಾರೆ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 21, 2023 10:45 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More