Siddaramaiah Lungi Leader: ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೀಬೇಡಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

ಸಾಧು ಶ್ರೀನಾಥ್​

Updated on: Jul 01, 2023 | 5:29 PM

Pralhad Joshi: ಪಂಚೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೆಯಬಾರದು ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದ್ದಾರೆ.

ಧಾರವಾಡ : ಪಂಚೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ (Siddaramaiah) ಕೂಡ ಲುಂಗಿ ಲೀಡರ್ ( Lungi Leader) ಅನ್ನೋದನ್ನ ಮರೆಯಬಾರದು ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಲೋ ಲೆವೆಲ್ ಲಾಂಗ್ವೇಜ್ ಇದು. ಆದರೆ ನಾನು ಭಾರತ ಸರ್ಕಾರದ ಮಂತ್ರಿಯಾಗಿ ಆ ಲೆವೆಲ್ ಗೆ ಇಳಿದು ಮಾತಾಡಲ್ಲ. ಆದರೆ ಸಿದ್ದರಾಮಯ್ಯನವರೂ ಸಹ ಲುಂಗಿ ಲೀಡರ್ ಅನ್ನೋದನ್ನ ಕಾಂಗ್ರೆಸ್ ಪಕ್ಷ ಮರೆಯಬಾರದು. ನಾವೂ ಸಹ ಅದೇ ಭಾಷೆಯಲ್ಲಿ ಉತ್ತರ ಕೊಡಬಹುದು. ಆದರೆ ಆ ಲೆವೆಲ್ ಗೆ ಇಳಿಯಲ್ಲ ಎಂದರು.

ಕಾಂಗ್ರೆಸ್ ಪಕ್ಷ ಬಳಸಿರುವ ಪಂಚೆ ಭಾಷೆಗೆ ನನ್ನ ಬಳಿ ಉತ್ತರ ಇಲ್ಲ ಅಂತ ಅಲ್ಲ, ನನ್ನ ಬಾಯಲ್ಲಿ ಉತ್ತರ ಇದೆ, ಆದರೆ ಆ ರೀತಿಯ ಅಸಭ್ಯ ಭಾಷೆ ಬಳಸೋದು ಯಾವ ಕಾಲಕ್ಕೂ ಸರಿ ಅಲ್ಲ. ನೇರವಾಗಿ ರಾಜಕಾರಣದಲ್ಲಿ ಡೇ ಟು ಡೇ ಬೇಸಿಸ್ ನಲ್ಲಿ ಸಂಬಂಧವಿಟ್ಟುಕೊಳ್ಳದ, ಸಂಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಭಾಷೆ ಬಳಸಿದ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ಕೊಡ್ತಾರೆ. ಕಾಂಗ್ರೆಸ್ ಪಕ್ಷ ಇದನ್ನು ಇಲ್ಲಿಗೇ ನಿಲ್ಲಿಸಲಿ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು‌.

Published on: Jul 01, 2023 05:28 PM
Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು