Karnataka Assembly Polls; ತಾತ ಸಿದ್ದರಾಮಯ್ಯ ಜೊತೆ ಕ್ಷೇತ್ರದಲ್ಲಿ ತಿರುಗಾಡಿ ರಾಜಕಾರಣ ತಿಳಿದುಕೊಳ್ಳುವ ಆಸಕ್ತಿ ಇದೆ: ಧವನ್ ರಾಕೇಶ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 19, 2023 | 11:35 AM

ಮುಂದೆ ಕಾನೂನು ವ್ಯಾಸಂಗ ಮಾಡಿ ಸಿದ್ದರಾಮಯ್ಯನವರ ಹಾಗೆ ರಾಜಕಾರಣದಲ್ಲಿ ಹೆಸರು ಮಾಡುವ ಕನಸು ತನಗಿದೆ ಎಂದು ಧವನ್ ಹೇಳಿದರು.

ಮೈಸೂರು: ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು ಅಂತ ನಮ್ಮಲ್ಲಿ ಹೇಳುತ್ತಾರೆ. ನಿನ್ನೆ ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಿದ್ದರಾಮಯ್ಯ (Siddaramaiah) ತಮ್ಮೊಂದಿಗೆ ಪ್ರಚಾರಕ್ಕೆ ಬಂದಿದ್ದ ಮೊಮ್ಮಗ ಧವನ್ ರಾಕೇಶ್ (Dhawan Rakesh) ಬಗ್ಗೆ ಮಾತಾಡಿದ್ದರು. ಪಿಯುಸಿ ವ್ಯಾಸಂಗ ಮಾಡುತ್ತಿರುವ ಧವನ್ ಜೊತೆ ಇಂದು ಸಿದ್ದರಾಮನಹುಂಡಿಯಲ್ಲಿ ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ಮಾತಾಡಿದ್ದಾರೆ. ತನಗೆ ರಾಜಕೀಯದಲ್ಲಿ ಬಹಳ ಆಸಕ್ತಿ ಇದೆ. ನಾಮಪತ್ರಿಕೆ ಸಲ್ಲಿಕೆ, ಚುನಾವಣಾ ಪ್ರಚಾರ (campaigning) ಮೊದಲಾದವುಗಳ ಬಗ್ಗೆ ಬಹಳ ಕುತೂಹಲ ಇರೋದ್ರಿಂದ ಅವುಗಳನ್ನು ತಿಳಿದುಕೊಳ್ಳಲು ತಾತನ ಜೊತೆ ಓಡಾಡುತ್ತಿರುವುದಾಗಿ ಧವನ್ ಹೇಳಿದರು. ಮುಂದೆ ಕಾನೂನು ವ್ಯಾಸಂಗ ಮಾಡಿ ಸಿದ್ದರಾಮಯ್ಯನವರ ಹಾಗೆ ರಾಜಕಾರಣದಲ್ಲಿ ಹೆಸರು ಮಾಡುವ ಕನಸು ತನಗಿದೆ ಎಂದು ಧವನ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.