ಕೋರ್ಟ್​ನಲ್ಲಿ ಏಕಾಗ್ರತೆಗೆ ಭಂಗ ತಂದುಕೊಳ್ಳದ ಸಿಂಧು ಕೋರ್ಟಿನಾಚೆ ನೋಡುಗರ ಏಕಾಗ್ರತೆಯನ್ನು ವಿಚಲಿಗೊಳಿಸುತ್ತಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2021 | 6:47 PM

ನೀಳಕಾಯದ ಸಿಂಧು ನೋಡಲು ಅಪ್ರತಿಮ ಸುಂದರಿ ಅಲ್ಲದೆ ಹೋದರೂ ಆಕರ್ಷಕ ರೂಪಿನ ಲಾವಣ್ಯವತಿ. ಆಟಗಾರ/ಆಟಗಾರ್ತಿ ಯಾರೇ ಆಗಿರಲಿ, ಅವರು ಭಾರತದ ಜರ್ಸಿಯಲ್ಲಿ ಬಹಳ ಚಂದ ಕಾಣುತ್ತಾರೆ.

ಪುಸರ್ಲ ವೆಂಕಟ ಸಿಂಧು ಅಂತ ಹೇಳಿದರೆ ನಿಮಗೆ ಯಾರು ಅಂತ ಕನ್ಫ್ಯೂಸ್ ಆಗಬಹುದು ಮಾರಾಯ್ರೇ. ಒಲಂಪಿಕ್ಸ್ನಲ್ಲಿ ಭಾರತಕ್ಕೆ ಎರಡೆರಡು ಬಾರಿ ಪದಕ ಗೆದ್ದ ಆಕೆ ಪಿವಿ ಸಿಂಧು ಅಂತಲೇ ಚಿರಪರಿಚಿತಳು. 26 ವರ್ಷ ವಯಸ್ಸಿನ ಹೈದರಾಬಾದ್ ಹುಡುಗಿ ಟೊಕಿಯೋ ಒಲಂಪಿಕ್ಸ್ ನಲ್ಲಿ ಬಂಗಾರದ ಪದಕ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಮೂರು ವರ್ಷಗಳ ನಂತರ ನಡೆಯುವ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಆಕೆ ಚಿನ್ನದ ಪದಕ ಗೆಲ್ಲುವ ಪಣ ತೊಟ್ಟಿದ್ದಾರೆ. ಆದರೆ ನಾವಿಲ್ಲಿ ಆಕೆಯ ಸಾಮರ್ಥ್ಯ ಮತ್ತು ಪದಕಗಳ ಬಗ್ಗೆ ಮಾತಾಡುತ್ತಿಲ್ಲ.

ನೀಳಕಾಯದ ಸಿಂಧು ನೋಡಲು ಅಪ್ರತಿಮ ಸುಂದರಿ ಅಲ್ಲದೆ ಹೋದರೂ ಆಕರ್ಷಕ ರೂಪಿನ ಲಾವಣ್ಯವತಿ. ಆಟಗಾರ/ಆಟಗಾರ್ತಿ ಯಾರೇ ಆಗಿರಲಿ, ಅವರು ಭಾರತದ ಜರ್ಸಿಯಲ್ಲಿ ಬಹಳ ಚಂದ ಕಾಣುತ್ತಾರೆ. ದೇಶದ ಜರ್ಸಿ ಕ್ರೀಡಾಪಟುಗಳ ಅಂದಕ್ಕೆ, ದೇಹದಾರ್ಢ್ಯಕ್ಕೆ ಮತ್ತು ವ್ಯಕ್ತಿತ್ವಕ್ಕೆ ವಿಶೇಷ ಮೆರಗು ನೀಡುತ್ತದೆ. ಸಿಂಧು ವಿಶೇಷತೆ ಗೊತ್ತಾ? ಆಕೆ ಇಂಡಿಯ ಜರ್ಸಿಯಲ್ಲದೆ ಬೇರೆ ಎಲ್ಲ ರೀತಿಯ ಧಿರಿಸುಗಳಲ್ಲಿ ಸುಂದರಿಯಾಗಿ ಕಂಗೊಳಿಸುತ್ತಾರೆ.

ಈ ವಿಡಿಯೋನಲ್ಲಿ ಬೇರೆ ಬೇರೆ ಉಡುಗೆಗಳಲ್ಲಿ ಮಿಂಚುತ್ತಿರುವ ಸಿಂಧು ಅವರನ್ನು ನೋಡಿ. ಎತ್ತರದ ಮತ್ತು ಉತ್ತಮ ಮೈಕಟ್ಟು ಹೊಂದಿರುವ ಕಾರಣ ಎಲ್ಲ ಬಗೆಯ ಡ್ರೆಸ್ಗಳು ಆಕೆಗೆ ಒಪ್ಪುತ್ತವೆ. ಉಡುಗೆ ಸಾಂಪ್ರದಾಯಿಕವಾಗಿರಲಿ ಅಥವಾ ಪಾಶ್ಚಾತ್ಯ, ಆಂಧ್ರ ಪ್ರದೇಶ ಹುಡುಗಿಯರು ಜಾಸ್ತಿ ಇಷ್ಟ ಪಡುವ ಲಂಗ-ದಾವಣಿಯಾಗಿರಲಿ ಇಲ್ಲವೇ ಸಮಾರಂಭಗಳಲ್ಲಿ ಡಿಸೈನರ್ ಲೆಹೆಂಗಾ ಚೋಲಿ-ದುಪ್ಪಟ್ಟಾ ಆಗಲೀ ಸಿಂಧು ಅವರಿಗೆ ಅದ್ಭುತವಾಗಿ ಒಪ್ಪುತ್ತವೆ. ಈ ಸೀರೆಯಲ್ಲಿ ಅವರನ್ನು ನೋಡಿ. ವ್ಹಾವ್! ಅಪ್ಸರೆಯಂತೆ ಕಾಣುತ್ತಿದ್ದಾರೆ.

ನಿಮಗೆ ಗೊತ್ತಿರಬಹುದು. ಹಲವಾರು ವಿಖ್ಯಾತ ಸೆಲಿಬ್ರಿಟಿ ಫ್ಯಾಶನ್ ಡಿಸೈನರ್ಗಳ ಉಡುಪುಗಳನ್ನು ಅವರು ಎಂಡಾರ್ಸ್ ಮಾಡುತ್ತಾರೆ. ಕೆಲ ಉತ್ಪಾದನೆಗಳಿಗೆ ಬ್ರ್ಯಾಂಡ್ ಅಂಬ್ಯಾಸಿಡರ್ ಕೂಡ ಆಗಿದ್ದಾರೆ. ಸೌಂದರ್ಯವನ್ನು ಆಸ್ವಾದಿಸುವರಲ್ಲಿ ಸಿಗುವ ಖುಷಿಯೇ ಬೇರೆ ಮಾರಾಯ್ರೇ!

ಇದನ್ನೂ ಓದಿ: Mumbai Indians: ಆಟಗಾರರಿರುವ ಹೋಟೆಲ್​ನ ವಿಡಿಯೋ ಹಂಚಿಕೊಂಡ ಮುಂಬೈ ಇಂಡಿಯನ್ಸ್: ಹೇಗಿದೆ ಗೊತ್ತಾ?