ಬಿಗ್ ಬಾಸ್ ಮನೆಯಲ್ಲಿ ಧನರಾಜ್​ಗೆ ಹಾಡಿನ ಮೂಲಕ ಬುದ್ಧಿ ಹೇಳಿದ ಹನುಮಂತ

Updated on: Oct 28, 2024 | 7:22 PM

ಸಿಂಗರ್​ ಹನುಮಂತ ಮತ್ತು ಧನರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಸಾಧ್ಯವಾದಷ್ಟು ಸಮಯ ಅವರು ಒಟ್ಟಿಗೆ ಕಾಲ ಕಳೆಯುತ್ತಾರೆ. ದೊಡ್ಮನೆಯ ಆಟದ ಬಗ್ಗೆ ಧನರಾಜ್ ಸ್ವಲ್ಪ ತಲೆ ಕೆಡಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಹನುಮಂತ ಅವರು ಹಾಡಿನ ಮೂಲಕವೇ ಬುದ್ಧಿ ಹೇಳಿದ್ದಾರೆ. ಆ ಸಂದರ್ಭದ ಪ್ರೋಮೋ ಇಲ್ಲಿದೆ..

ಸಿಂಗರ್ ಆಗಿದ್ದರೂ ಕೂಡ ಬಿಗ್ ಬಾಸ್​ ಮನೆಯಲ್ಲಿ ಹನುಮಂತ ಹೆಚ್ಚಾಗಿ ಹಾಡುತ್ತಿಲ್ಲ ಎಂಬುದು ಕೆಲವರ ಆರೋಪ ಆಗಿತ್ತು. ಅದಕ್ಕಾಗಿ ಹನುಮಂತ ಈಗ ಹಾಡಿನ ಮೂಲಕವೇ ಧನರಾಜ್​ ಜೊತೆ ಮಾತನಾಡಿದಂತಿದೆ. ಬಿಗ್ ಬಾಸ್​ ಮನೆಯಲ್ಲಿ ಹೇಗೆ ಇರಬೇಕು? ಯಾವ ರೀತಿ ಆಟ ಆಡಬೇಕು ಎಂಬುದನ್ನು ಹಾಡಿನ ಮೂಲಕ ಧನರಾಜ್​ಗೆ ಹನುಮಂತ್ ತಿಳಿಸಿದ್ದಾರೆ. ಈ ಸಂಚಿಕೆಯು ಅಕ್ಟೋಬರ್​ 28ರಂದು ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More