Video: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪೆಟ್ರೋಲ್ ಬಂಕ್​​ನ ಲೈಟಿಂಗ್ ಕಂಬ, ಸಮಾಜವಾದಿ ಪಕ್ಷದ ನಾಯಕ ಸಾವು

Updated on: Feb 16, 2026 | 8:19 AM

ಚಲಿಸುತ್ತಿದ್ದ ಕಾರಿನ ಮೇಲೆ ಪೆಟ್ರೋಲ್ ಬಂಕ್​ನ ಮಾಸ್ಟ್​ ಕಂಬ ಕುಸಿದು ಬಿದ್ದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈಯಕ್ತಿಕ ಕೆಲಸಕ್ಕಾಗಿ ಕ್ರೆಟಾ ಕಾರಿನಲ್ಲಿ ಬಾಬುಗಂಜ್‌ನಿಂದ ಪ್ರತಾಪ್‌ಗಢ ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಪೆಟ್ರೋಲ್ ಪಂಪ್ ಮುಂದೆ ಕ್ರೇನ್ ಸಹಾಯದಿಂದ ಭಾರತ್ ಪೆಟ್ರೋಲಿಯಂನ ಸುಮಾರು 65 ಅಡಿ ಎತ್ತರದ ಎತ್ತರದ ಮಾಸ್ಟ್ ಕಂಬವನ್ನು ನಿರ್ಮಿಸಲಾಗುತ್ತಿತ್ತು. ಕಂಬ ಸುಮಾರು 40 ಕ್ವಿಂಟಾಲ್ ತೂಕವಿತ್ತು ಎಂದು ವರದಿಯಾಗಿದೆ.

ಪ್ರತಾಪಗಢ, ಫೆಬ್ರವರಿ 16: ಚಲಿಸುತ್ತಿದ್ದ ಕಾರಿನ ಮೇಲೆ ಪೆಟ್ರೋಲ್ ಬಂಕ್​ನ ಲೈಟಿಂಗ್​ ಕಂಬ ಕುಸಿದು ಬಿದ್ದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈಯಕ್ತಿಕ ಕೆಲಸಕ್ಕಾಗಿ ಕ್ರೆಟಾ ಕಾರಿನಲ್ಲಿ ಬಾಬುಗಂಜ್‌ನಿಂದ ಪ್ರತಾಪ್‌ಗಢ ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಪೆಟ್ರೋಲ್ ಪಂಪ್ ಮುಂದೆ ಕ್ರೇನ್ ಸಹಾಯದಿಂದ ಭಾರತ್ ಪೆಟ್ರೋಲಿಯಂನ ಸುಮಾರು 65 ಅಡಿ ಎತ್ತರದ ಎತ್ತರದ ಮಾಸ್ಟ್ ಕಂಬವನ್ನು ನಿರ್ಮಿಸಲಾಗುತ್ತಿತ್ತು. ಕಂಬ ಸುಮಾರು 40 ಕ್ವಿಂಟಾಲ್ ತೂಕವಿತ್ತು ಎಂದು ವರದಿಯಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More