Davangere RTO: ಕದ್ದ ಬೈಕ್​ಗಳಿಗೆ ದಾವಣಗೆರೆ RTO ಕಚೇರಿಯಲ್ಲಿಯೇ ಸಕ್ರಮ ಭಾಗ್ಯ! ನಾಲ್ವರು ಸಿಬ್ಬಂದಿ ಅರೆಸ್ಟ್​

Edited By: ಸಾಧು ಶ್ರೀನಾಥ್​

Updated on: Aug 02, 2023 | 2:28 PM

ನಕಲಿ ದಾಖಲೆ ಸೃಷ್ಟಿಸಿ, ಕದ್ದ ಬೈಕ್​ಗಳನ್ನು ಬೇರೆಯರ ಹೆಸರಿಗೆ ನೋಂದಣಿ ಮಾಡಿದ್ದ ಆರೋಪ ಈ ನಾಲ್ವರು ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ದಾವಣಗೆರೆ ಆರ್​ಟಿಒ ಕಚೇರಿಯ ಸಿಬ್ಬಂದಿ ಪ್ರದೀಪ್​, ಜಗದೀಶ್​​​, ಶಶಿಕುಮಾರ್​ ಮತ್ತು ವಸಂತಕುಮಾರ್​ ಬಂಧಿತ ಆರೋಪಿಗಳು.

ದಾವಣಗೆರೆ, ಆಗಸ್ಟ್​ 2: ದಾವಣಗೆರೆ ಆರ್​ಟಿಒ (Davangere RTO) ಕಚೇರಿ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಆರ್​ಟಿಒ ಕಚೇರಿಯ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಆರ್​ಟಿಒ ಕಚೇರಿಯ ಸಿಬ್ಬಂದಿ ಪ್ರದೀಪ್​, ಜಗದೀಶ್​​​, ಶಶಿಕುಮಾರ್​ ಮತ್ತು ವಸಂತಕುಮಾರ್​ ಬಂಧಿತ ಆರೋಪಿಗಳು. ನಕಲಿ ದಾಖಲೆ (documents) ಸೃಷ್ಟಿಸಿ, ಕದ್ದ ಬೈಕ್​ಗಳನ್ನು (Bike Theft) ಬೇರೆಯರ ಹೆಸರಿಗೆ ನೋಂದಣಿ ಮಾಡಿದ್ದ ಆರೋಪ ಈ ನಾಲ್ವರು ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.

ಮೂಲ ಮಾಲೀಕರ ಬದಲು ಬ್ರೋಕರ್ ಸಹಿ ಮಾಡಿಸಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿತ್ತು. ಆರ್​ಟಿಒ ಏಜೆಂಟ್​​ ರಸೂಲ್​ ಎಂಬಾತನಿಂದ ಸಹಿ ಮಾಡಿ ದಾಖಲೆ ಸೃಷಿಯಾಗುತ್ತಿತ್ತು. ಹೊನ್ನಾಳಿ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬೈಕ್​ಗಳ ಪರಿಶೀಲನೆ ವೇಳೆ ದಾವಣಗೆರೆ ಆರ್​ಟಿಒ ಕಚೇರಿ ಸಿಬ್ಬಂದಿ ಕೃತ್ಯ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಆರ್​ಟಿಒ ಕಚೇರಿಯ 10 ಸಿಬ್ಬಂದಿ ವಿರುದ್ಧ ಕೇಸ್ ದಾಖಲಾಗಿದೆ. ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ .ಅರುಣ್ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More