Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ 79 ಅಡಿ ಎತ್ತರದ ಲಿಬರ್ಟಿ ಸ್ಟ್ಯಾಚ್ಯೂ

Updated on: Dec 16, 2025 | 9:53 AM

ದಕ್ಷಿಣ ಬ್ರೆಜಿಲ್​ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದೆ. ಬಲವಾದ ಗಾಳಿ ಬೀಸಿದ್ದು, ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಮೊದಲ ಪ್ರತಿಮೆ ಅಮೆರಿಕದ ನ್ಯೂಜರ್ಸಿಯಲ್ಲಿದೆ. ವೇಗವಾಗಿ ಗಾಳಿ ಬೀಸುತ್ತಿದ್ದ ಪರಿಣಾಮ ಪ್ರತಿಮೆ ಓರೆಯಾಗಿ ಬಳಿಕ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ. ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ಪ್ರತಿಮೆಯ 11 ಮೀಟರ್ ಎತ್ತರದ ಸ್ತಂಭ ಬಲಿಷ್ಠವಾಗಿಯೇ ಇತ್ತು. ಗಾಳಿಯ ವೇಗ ಗಂಟೆಗೆ 80 ರಿಂದ 90 ಕಿ.ಮೀ ವೇಗದಲ್ಲಿತ್ತು. ಅಲ್ಲಿದ್ದ ಅಂಗಡಿ ಸಿಬ್ಬಂದಿ ಕೂಡಲೇ ಜನರನ್ನು ಅಲ್ಲಿಂದ ಸ್ಥಳಾಂತರಿಸಿದರು. ಯಾರಿಗೂ ಗಾಯಗಳಾಗಿಲ್ಲ.

ಬ್ರೆಜಿಲ್, ಡಿಸೆಂಬರ್ 16: ದಕ್ಷಿಣ ಬ್ರೆಜಿಲ್​ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದೆ. ಬಲವಾದ ಗಾಳಿ ಬೀಸಿದ್ದು, ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಮೊದಲ ಪ್ರತಿಮೆ ಅಮೆರಿಕದ ನ್ಯೂಜರ್ಸಿಯಲ್ಲಿದೆ. ವೇಗವಾಗಿ ಗಾಳಿ ಬೀಸುತ್ತಿದ್ದ ಪರಿಣಾಮ ಪ್ರತಿಮೆ ಓರೆಯಾಗಿ ಬಳಿಕ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ. ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ಪ್ರತಿಮೆಯ 11 ಮೀಟರ್ ಎತ್ತರದ ಸ್ತಂಭ ಬಲಿಷ್ಠವಾಗಿಯೇ ಇತ್ತು. ಗಾಳಿಯ ವೇಗ ಗಂಟೆಗೆ 80 ರಿಂದ 90 ಕಿ.ಮೀ ವೇಗದಲ್ಲಿತ್ತು. ಅಲ್ಲಿದ್ದ ಅಂಗಡಿ ಸಿಬ್ಬಂದಿ ಕೂಡಲೇ ಜನರನ್ನು ಅಲ್ಲಿಂದ ಸ್ಥಳಾಂತರಿಸಿದರು. ಯಾರಿಗೂ ಗಾಯಗಳಾಗಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More