ರಾಜೀನಾಮೆ ಬಗ್ಗೆ ಸುಮಲತಾ ಶಾಕಿಂಗ್ ಮಾತು; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 21, 2023 | 9:26 PM

ರಾಜಕೀಯ ತುಂಬ ನಡೆಯುತ್ತಿದೆ. ಮಳೆ ಬಾರದೇ ಇದ್ದರೇ ಕುಡಿಯುವ ನೀರಿಗೆ ಏನು ಮಾಡಬೇಕು ಗೊತ್ತಿಲ್ಲ. ಸರ್ಕಾರದ ಪರ ನಿಲ್ಲಲು ನಾನು ರೆಡಿ ಇದ್ದೇನೆ. ನಾನು ಎಂಪಿ ಆಗಿ ಏನು ಮಾಡಬೇಕು ಮಾಡುತ್ತಿದ್ದೇನೆ. ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಬರಿಸಬೇಕಿದೆ.

ಮಂಡ್ಯ, ಸೆ.21: ಜಿಲ್ಲೆಯ ಏಳು ತಾಲೂಕು ತೀವ್ರ ಬರ ಇದೆ. ಸುಮಲತಾ ರಾಜೀನಾಮೆ ವಿಚಾರ ಮಾತನಾಡುವ ಸಮಯವಲ್ಲ ಇದು ಎಂದು ಮಂಡ್ಯ(Mandya)ದಲ್ಲಿ ಸಂಸದೆ ಸುಮಲತಾ(Sumalata)ಹೇಳಿದರು. ‘ರಾಜಕೀಯ ತುಂಬ ನಡೆಯುತ್ತಿದೆ. ಮಳೆ ಬಾರದೇ ಇದ್ದರೇ ಕುಡಿಯುವ ನೀರಿಗೆ ಏನು ಮಾಡಬೇಕು ಗೊತ್ತಿಲ್ಲ. ಸರ್ಕಾರದ ಪರ ನಿಲ್ಲಲು ನಾನು ರೆಡಿ ಇದ್ದೇನೆ. ನಾನು ಎಂಪಿ ಆಗಿ ಏನು ಮಾಡಬೇಕು ಮಾಡುತ್ತಿದ್ದೇನೆ. ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಬರಿಸಬೇಕಿದೆ. ಜನರು ಮುಗ್ದರು ಇದ್ದು, ಅವರಿಗೆ ಮಾಹಿತಿ‌ ಇರಲ್ಲ. ರಾಜ್ಯ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡುವ ಸಂದರ್ಭ ಇಲ್ಲ. ಮಂಡ್ಯ ಜಿಲ್ಲೆಯ ಜನ ನನಗೆ ಮತ ಹಾಕಿದ್ದಾರೆ. ನನಗೆ ಜವಬ್ದಾರಿ ಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡಲು ಯೋಚನೆ ಮಾಡುವುದಿಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ