ಪಾರ್ಟಿ ಮಾಡಲು ಬಂದ ಸನ್ನಿ ಲಿಯೋನಿ, ಬೆಂಗಳೂರಿನ ಬಗ್ಗೆ ಹೀಗಂದರು

Updated on: Dec 08, 2024 | 8:19 AM

Sunny Leone: ನಟಿ ಸನ್ನಿ ಲಿಯೋನಿ ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದರು. ಸನ್ನಿ ಬೆಂಗಳೂರಿಗೆ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್​ಗೆ ಅಲ್ಲ ಬದಲಿಗೆ ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಲು.

ನಟಿ ಸನ್ನಿ ಲಿಯೋನಿ ನಿನ್ನೆ ಸಂಜೆ ಬೆಂಗಳೂರಿಗೆ ಬಂದಿದ್ದರು. ಸನ್ನಿ ಲಿಯೋನಿ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್​ಗಾಗಿ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ಪಾರ್ಟಿ ಮಾಡಲು. ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ವೈಟ್ ಲೋಟಸ್ ಕ್ಲಬ್​ನಲ್ಲಿ ನಡೆಯಲಿರುವ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಮುಖ್ಯ ಅತಿಥಿ ಆಗಿದ್ದರು. ನಿನ್ನೆ (ಡಿಸೆಂಬರ್ 07) ಪಾರ್ಟಿ ಬಲು ಅದ್ಧೂರಿಯಾಗಿ ನಡೆದಿದ್ದು, ಪಾರ್ಟಿಯಲ್ಲಿ ಸನ್ನಿ ಲಿಯೋನಿ ಡ್ಯಾನ್ಸ್ ಪ್ರದರ್ಶನ ಸಹ ನೀಡಿದ್ದಾರೆ. ಬುಕ್​ಮೈ ಶೋನಲ್ಲಿ ಈ ಪಾರ್ಟಿಯ ಟಿಕೆಟ್​ಗಳನ್ನು ಸಹ ಮಾರಾಟ ಮಾಡಲಾಗಿತ್ತು. ಪಾರ್ಟಿಗೆ ಹೋಗುವ ಮುಂಚೆ ಮಾಧ್ಯಮದವರೊಟ್ಟಿಗೆ ಸನ್ನಿ ಲಿಯೋನಿ ಸಂವಾದ ನಡೆಸಿದರು, ಈ ಸಮಯದಲ್ಲಿ ಬೆಂಗಳೂರಿನ ಬಗ್ಗೆ, ಪಾರ್ಟಿ ಬಗ್ಗೆ ನಟಿ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More