Karnataka Assembly Polls; ಸ್ವರೂಪ್ ಕೂಡ ನನ್ನ ಮಗ, ಅವನನ್ನು ಹಾಸನ ಮತದಾರರು ಗೆಲ್ಲಿಸಲೇಬೇಕು: ಭವಾನಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Apr 19, 2023 | 4:34 PM

ತಮಗಾದ ನಿರಾಶೆ, ಹತಾಷೆ ಮತ್ತು ನೋವನ್ನು ಬದಿಗೊತ್ತಿ ಭವಾನಿ ಪ್ರಚಾರಕ್ಕಿಳಿದಿದ್ದಾರೆ. ಇಂದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಭರ್ಜರಿಯಾಗಿ ಪ್ರಚಾರ ನಡೆಸಿದರು

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭಗೀರಥ ಪ್ರಯತ್ನ ನಡೆಸಿ ಕೊನೆಗೂ ಅದು ಸಿಗದೆ ಹೋದಾಗ ತೀವ್ರ ನಿರಾಶರಾದ ಭವಾನಿ ರೇವಣ್ಣ (Bhavani Revanna) ಪಕ್ಷದ ಅಭ್ಯರ್ಥಿಗಳ ಪರ ಅದರಲ್ಲೂ ವಿಶೇಷವಾಗಿ ಹಾಸನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲಾರರು ಎಂದು ಜನ ಭಾವಿಸಿದ್ದರು. ಅದರೆ, ತಮಗಾದ ನಿರಾಶೆ, ಹತಾಷೆ ಮತ್ತು ನೋವನ್ನು ಬದಿಗೊತ್ತಿ ಭವಾನಿ ಪ್ರಚಾರಕ್ಕಿಳಿದಿದ್ದಾರೆ. ಇಂದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ (Swaroop Prakash) ಭರ್ಜರಿಯಾಗಿ ಪ್ರಚಾರ ನಡೆಸಿದರು. ಅವರ ಪ್ರತಿಮಾತಿಗೆ ನೆರೆದ ಜನರಿಂದ ಶಿಳ್ಳೆ, ಚಪ್ಪಾಳೆ. ಸ್ವರೂಪ್ ತಮಗೆ ಮತ್ತೊಬ್ಬ ಮಗನಿದ್ದಂತೆ, ಅವರನ್ನು ನೀವೆಲ್ಲ ಗೆಲ್ಲಿಸಲೇಬೇಕು ಅಂತ ಭವಾನಿ ಹೇಳಿದಾರ ಕೊಂಚ ದೂರದಲ್ಲಿದ್ದ ಸ್ವರೂಪ್ ಓಡಿಬಂದು ಭವಾನಿಯವರ ಪಾದ ಮುಟ್ಟಿ ನಮಸ್ಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.