ಕಾರ್ತಿಕ್ ವಿರುದ್ಧ ಸಿಟ್ಟಿಗೆದ್ದ ತನಿಷಾ; ಗೆಳೆಯನ ಫೋಟೋ ಸುಟ್ಟ ‘ಬೆಂಕಿ’

Updated on: Jan 15, 2024 | 9:15 AM

15ನೇ ವಾರದ ನಾಮಿನೇಷನ್​ನಲ್ಲಿ ತನಿಷಾ ಅವರು ಕಾರ್ತಿಕ್ ಹೆಸರು ತೆಗೆದುಕೊಂಡಿದ್ದಾರೆ. ಈ ಬಾರಿಯ ನಾಮಿನೇಷನ್​ನಲ್ಲಿ ತಾವು ಸೂಚಿಸುವ ಸ್ಪರ್ಧಿಯ ಹೆಸರಿನ ಫೋಟೋವನ್ನು ಸುಡಬೇಕಿತ್ತು. ಈ ವೇಳೆ ತನಿಷಾ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡಿದ್ದಾರೆ.

ಕಾರ್ತಿಕ್ ಮಹೇಶ್ ಹಾಗೂ ತನಿಷಾ (Tanisha Kuppanda) ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಆದರೆ, ದಿನ ಕಳೆದಂತೆ ಈ ಫ್ರೆಂಡ್​ಶಿಪ್ ಮಾಸುತ್ತಿದೆ. ಈಗ 15ನೇ ವಾರದ ನಾಮಿನೇಷನ್​ನಲ್ಲಿ ತನಿಷಾ ಅವರು ಕಾರ್ತಿಕ್ ಹೆಸರು ತೆಗೆದುಕೊಂಡಿದ್ದಾರೆ. ಈ ಬಾರಿಯ ನಾಮಿನೇಷನ್​ನಲ್ಲಿ ತಾವು ಸೂಚಿಸುವ ಸ್ಪರ್ಧಿಯ ಹೆಸರಿನ ಫೋಟೋವನ್ನು ಸುಡಬೇಕಿತ್ತು. ಈ ವೇಳೆ ತನಿಷಾ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡಿದ್ದಾರೆ. ಕಳೆದ ವಾರ ಕಾರ್ತಿಕ್ ಅವರು ತನಿಷಾ ಹೆಸರನ್ನು ನಾಮಿನೇಷನ್​ಗೆ ತೆಗೆದುಕೊಂಡಿದ್ದರು.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು (ಜನವರಿ 15) ರಾತ್ರಿ 9:30ಕ್ಕೆ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More