ಉಕ್ರೇನಿನಾದ್ಯಂತ ರಾತ್ರೋರಾತ್ರಿ ರಷ್ಯಾ ಪಡೆಗಳು ದಾಳಿ ನಡೆಸಿವೆ. ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನಿನ ಕ್ಯಾಬಿನೆಟ್ ಬಿಲ್ಡಿಂಗ್ ಮೇಲೂ ದಾಳಿ ನಡೆದಿದ್ದು, ವಿಡಿಯೋ ಎಲ್ಲೆಡೆ ಹರಿದಾಡಿದೆ. ರಾಜಧಾನಿ ಕೈವ್‌ನಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೈವ್‌ನಲ್ಲಿನ ಹಲವಾರು ಬಹುಮಹಡಿ ಕಟ್ಟಡಗಳಿಗೆ ಈ ದಾಳಿಗಳು ಹಾನಿಯನ್ನುಂಟುಮಾಡಿವೆ . ಎತ್ತರದ ಮಹಡಿಯಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿರುವುದನ್ನು ಕಾಣಬಹುದು. ಈಶಾನ್ಯ ಸುಮಿ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ