Video: ಮದ್ಯಪಾನ ಮಾಡಿ ಶಾಲೆಗೆ ತೂರಾಡುತ್ತಾ ಬಂದು ಮೇಜಿನಡಿ ಮಲಗಿದ ಶಿಕ್ಷಕ

Updated on: Sep 04, 2025 | 12:12 PM

ಶಿಕ್ಷಕರೊಬ್ಬರು ಶಾಲೆಗೆ ಮದ್ಯಪಾನ ಮಾಡಿ ತೂರಾಡುತ್ತಾ ಬಂದು, ಮೇಜಿನಡಿ ನಿದ್ರೆಗೆ ಜಾರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಜೈನೂರ್ ಮಂಡಲದ ಸುಕುತ್ಪಲ್ಲಿಯಲ್ಲಿರುವ ಈ ಘಟನೆ ನಡೆದಿದೆ.ಜೆ ವಿಲಾಸ್ ಮದ್ಯದ ಅಮಲಿನಲ್ಲಿ ಬಂದಿದ್ದಾರೆಂದು ವರದಿಯಾಗಿದೆ. ನಂತರ ಅವರು ತರಗತಿಯೊಳಗೆ ಮಲಗಿದ್ದಾರೆ.

ತೆಲಂಗಾಣ, ಆಗಸ್ಟ್​ 04: ಮಕ್ಕಳಿಗೆ ಯಾವುದು ತಪ್ಪು, ಯಾವುದು ಸರಿ ಎಂದು ತಿಳಿಸಬೇಕಾದ   ಶಿಕ್ಷಕರೊಬ್ಬರು ಶಾಲೆಗೆ ಮದ್ಯಪಾನ ಮಾಡಿ ತೂರಾಡುತ್ತಾ ಬಂದು, ಮೇಜಿನಡಿ ನಿದ್ರೆಗೆ ಜಾರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಜೈನೂರ್ ಮಂಡಲದ ಸುಕುತ್ಪಲ್ಲಿಯಲ್ಲಿರುವ ಘಟನೆ ನಡೆದಿದೆ.ಜೆ ವಿಲಾಸ್ ಮದ್ಯದ ಅಮಲಿನಲ್ಲಿ ಬಂದಿದ್ದಾರೆಂದು ವರದಿಯಾಗಿದೆ. ನಂತರ ಅವರು ತರಗತಿಯೊಳಗೆ ಮಲಗಿದ್ದಾರೆ. ಪರಿಸ್ಥಿತಿಯನ್ನು ಕಂಡ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.ಜಿಲ್ಲಾ ಬುಡಕಟ್ಟು ಕಲ್ಯಾಣ ಇಲಾಖೆ ಉಪನಿರ್ದೇಶಕಿ ರಮಾ ದೇವಿ ಅವರು ಕರ್ತವ್ಯ ನಿರ್ಲಕ್ಷ್ಯ ಮತ್ತು ಸೇವಾ ನಿಯಮಗಳ ಉಲ್ಲಂಘನೆಗಾಗಿ ವಿಲಾಸ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 04, 2025 12:09 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More