ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಸಿಬ್ಬಂದಿಗಳ ಭರ್ಜರಿ ಟ್ರೆಕ್ಕಿಂಗ್: ವಿಡಿಯೋ ನೋಡಿ

Updated on: Oct 26, 2023 | 11:31 AM

Team India Trucking: ಭಾರತೀಯ ಸಹಾಯಕ ಸಿಬ್ಬಂದಿಗಳು ಧರ್ಮಶಾಲಾದಲ್ಲಿ ಭರ್ಜರಿ ಟ್ರೆಕ್ಸಿಂಗ್ ನಡೆಸಿದ್ದಾರೆ. ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ರಾಹುಲ್ ದ್ರಾವಿಡ್ ಮತ್ತು ಉಳಿದ ಕೋಚಿಂಗ್ ಸಿಬ್ಬಂದಿ ಧರ್ಮಶಾಲಾದಲ್ಲಿ ಚಾರಣಕ್ಕೆ ಹೋಗುತ್ತಿರುವುದನ್ನು ಕಾಣಬಹುದು.

ಟೀಮ್ ಇಂಡಿಯಾ (Team India) ಆಟಗಾರರು ಹಾಗೂ ಸಿಬ್ಬಂದಿಗಳು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮುಂದಿನ ಪಂದ್ಯಕ್ಕಾಗಿ ಲಕ್ನೋಗೆ ತಲುಪಿದೆ. ಇದಕ್ಕೂ ಮುನ್ನ ಭಾರತೀಯ ಕೋಚ್ ಸೇರಿದಂತೆ ಕೆಲ ಸಿಬ್ಬಂದಿಗಳು ಧರ್ಮಶಾಲಾದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಟ್ರಯಂಡ್ ಟ್ರೆಕ್‌ಗೆ ಆಟಗಾರರನ್ನು ಬಿಸಿಸಿಐ ಅನುಮತಿಸದಿದ್ದರೂ, ಭಾರತೀಯ ಸಹಾಯಕ ಸಿಬ್ಬಂದಿಗಳು ಧರ್ಮಶಾಲಾದಲ್ಲಿ ಭರ್ಜರಿ ಟ್ರೆಕ್ಸಿಂಗ್ ನಡೆಸಿದ್ದಾರೆ. ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ರಾಹುಲ್ ದ್ರಾವಿಡ್ ಮತ್ತು ಉಳಿದ ಕೋಚಿಂಗ್ ಸಿಬ್ಬಂದಿ ಧರ್ಮಶಾಲಾದಲ್ಲಿ ಚಾರಣಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ”ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಾವಳಿ ಅದ್ಭುತವಾಗಿದೆ. ಪರ್ವತಗಳನ್ನು ಹತ್ತುವುದು ತುಂಬಾ ಕಷ್ಟ. ಟ್ರೈಂಡ್ ಟ್ರೆಕ್ ತುಂಬಾ ಸವಾಲಿನದು,” ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More