VIDEO: ಕೋಚ್ ರಾಹುಲ್ ದ್ರಾವಿಡ್ ಜೊತೆ ಜಾಲಿ ಮೂಡ್ನಲ್ಲಿ ಟೀಮ್ ಇಂಡಿಯಾ
India vs England: ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 29 ರಂದು ಆಡಲಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಅನ್ನು ಎದುರಿಸಲಿದೆ.
ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ (ICC Cricket World Cup 2023) ಅತ್ಯುತ್ತಮ ಫಾರ್ಮ್‌ನಲ್ಲಿದೆ. ಭಾರತ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಈ ಮೂಲಕ ಗೆಲುವಿನ ಲಯ ಮುಂದುವರೆಸಿದೆ. ಅದರಲ್ಲೂ ನ್ಯೂಝಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಆಟಗಾರರು ಇದೀಗ ವಿಶ್ರಾಂತಿಯಲ್ಲಿದ್ದಾರೆ. ಈ ವಿಶ್ರಾಂತಿ ನಡುವೆ ಟೀಮ್ ಇಂಡಿಯಾ ಸಿಬ್ಬಂದಿಗಳು ಟ್ರೆಕ್ಕಿಂಗ್ ಮೂಲಕ ಧರ್ಮಶಾಲಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಈ ಟ್ರೆಕ್ಕಿಂಗ್ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ Instagram ಖಾತೆಯಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ, ರಾಹುಲ್ ದ್ರಾವಿಡ್ ಮತ್ತು ಉಳಿದ ಕೋಚಿಂಗ್ ಸಿಬ್ಬಂದಿ ಧರ್ಮಶಾಲಾದಲ್ಲಿ ಚಾರಣಕ್ಕೆ ಹೋಗುತ್ತಿರುವುದನ್ನು ಕಾಣಬಹುದು.
ಇದೇ ವೇಳೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮಾತನಾಡಿದ್ದು, ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಾವಳಿ ಅದ್ಭುತವಾಗಿದೆ ಎಂದರು. ಪರ್ವತಗಳನ್ನು ಹತ್ತುವುದು ತುಂಬಾ ಕಷ್ಟ. ಟ್ರೈಂಡ್ ಟ್ರೆಕ್ ತುಂಬಾ ಸವಾಲಿನದು. ಪರ್ವತಾರೋಹಣ ಸಮಯದಲ್ಲಿ ಬಂಡೆಗಳ ಮೇಲೆ ನಡೆಯುವುದು ಅಪಾಯಗಳಿಂದ ಕೂಡಿದೆ. ಹಾಗಾಗಿ ನಮ್ಮ ಆಟಗಾರರನ್ನು ಇಲ್ಲಿಗೆ ಕರೆತರಲು ಸಾಧ್ಯವಾಗಲಿಲ್ಲ. ಆದರೆ, ಅವರೆಲ್ಲರೂ ವಿಶ್ರಾಂತಿ ಪಡೆಯಬೇಕಾದಾಗ ಇಲ್ಲಿಗೆ ಬಂದು ಇಲ್ಲಿನ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬೇಕೆಂದು ನಾನು ಬಯಸುತ್ತೇನೆ,” ಎಂದರು.
ಮೆಕ್ಲಿಯೋಡ್‌ಗಂಜ್‌ನಲ್ಲಿರುವ ಗ್ಲುನಿಂದ ಈ ಚಾರಣವನ್ನು ಆರಂಭಿಸಿದ್ದೇವೆ ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ. ಕೊನೆಯ ಚಾರಣ ಸ್ವಲ್ಪ ಕಷ್ಟಕರವಾಗಿತ್ತು. ಆ ಸಮಯದಲ್ಲಿ ಅರ್ಧ ಗಂಟೆ ತುಂಬಾ ಚಾಲೆಂಜಿಂಗ್ ಆಗಿತ್ತು. ಆದರೆ ಅಂತಿಮವಾಗಿ ಪ್ರಕೃತಿಯ ಸೌಂದರ್ಯವನ್ನು ನೋಡಿದಾಗ ಆಯಾಸವೆಲ್ಲ ಮಾಯವಾಗುತ್ತದೆ ಎಂದರು.
View this post on Instagram
ರಾಹುಲ್ ಜೊತೆ ಕೆಎಲ್ ಎಂಜಾಯ್:
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಜೊತೆ ಕೆಎಲ್ ರಾಹುಲ್ ಕೂಡ ಟ್ರೆಕ್ಕಿಂಗ್ಗೆ ತೆರಳಿದ್ದಾರೆ. ಇದರ ಫೋಟೋವನ್ನು ಕೆಎಲ್ಆರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ಟೀಮ್ ಇಂಡಿಯಾ ಕೋಚ್ ಸಖತ್ ಎಂಜಾಯ್ ಮಾಡುತ್ತಿರುವುದು ಕಾಣಬಹುದು.
nothing beats natures ice dip 🩵 pic.twitter.com/g1lMM4b553
— K L Rahul (@klrahul) October 25, 2023
ಭಾರತದ ಮುಂದಿನ ಪಂದ್ಯ ಯಾವಾಗ?
ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 29 ರಂದು ಆಡಲಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಅನ್ನು ಎದುರಿಸಲಿದೆ.