Tarot Card Horoscope: 2023ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್, ಫೈನಲ್ ತಲುಪುವ ತಂಡ ಯಾವುದು? ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಅವರಿಂದ ಸೆನ್ಸೇಷನಲ್ ಭವಿಷ್ಯ
2023ರ ಕ್ರಿಕೆಟ್ ವಿಶ್ವ ಕಪ್ನಲ್ಲಿ ಯಾವ್ಯಾವ ತಂಡ ಸೆಮಿಫೈನಲ್ಗೆ ಬರಬಹುದು ಎಂಬ ಬಗ್ಗೆ ಮುಂಬೈ ಮೂಲದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಯಾವ್ಯಾವ ಯಾವ ಎರಡು ತಂಡ ಫೈನಲ್ ತಲುಪಬಹುದು ಮತ್ತು ಎರಡು ತಂಡದ ಪೈಕಿ ವಿಶ್ವಕಪ್ ಕಿರೀಟ ಯಾರದಾಗಿಸಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿದ್ದಾರೆ.
2023ರ ಪುರುಷರ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಈಗಾಗಲೇ ಅರ್ಧ ದಾರಿ ಸವೆಸಿಯಾಗಿದೆ. ಯಾವ್ಯಾವ ತಂಡ ಸೆಮಿಫೈನಲ್ ಗೆ ಬರಬಹುದು ಎಂಬ ಬಗ್ಗೆ ನಾನಾ ಬಗೆಯ ಲೆಕ್ಕಾಚಾರಗಳು ಸಿಗುತ್ತಾ ಇವೆ. ಇಂಥ ಸನ್ನಿವೇಶದಲ್ಲಿ ಮುಂಬೈ ಮೂಲದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಅವರು ಯಾವ್ಯಾವ ತಂಡ ಸೆಮಿಫೈನಲ್ ಗೆ ಬರಬಹುದು, ಆ ಪೈಕಿ ಯಾವ ಎರಡು ತಂಡ ಫೈನಲ್ ತಲುಪಬಹುದು ಮತ್ತು ಎರಡು ತಂಡದ ಪೈಕಿ ವಿಶ್ವಕಪ್ ಕಿರೀಟ ಯಾರದಾಗಿಸಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿದ್ದಾರೆ. ಅವರು ಸೆಪ್ಟೆಂಬರ್ ತಿಂಗಳಿನಲ್ಲೇ ತಂಡಗಳ ಪ್ರದರ್ಶನದ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಅದರಲ್ಲಿ ಶೇಕಡಾ ತೊಂಬತ್ತರಷ್ಟು ಭವಿಷ್ಯ ನಿಜವಾಗಿದೆ. ಅದರಲ್ಲಿ ಆಗಿರುವ ವ್ಯತ್ಯಾಸ ಅಂದರೆ ನ್ಯೂಜಿಲ್ಯಾಂಡ್ ತಂಡದ್ದು ಮಾತ್ರ. ಈ ಬಗ್ಗೆ ಅವರನ್ನೇ ಟಿವಿ ನೈನ್ ಕನ್ನಡ ವೆಬ್ ಸೈಟ್ ಮಾತನಾಡಿಸಿದ್ದು, ಇದಕ್ಕೆ ನ್ಯೂಜಿಲ್ಯಾಂಡ್ ತಂಡದ ನಾಯಕ ಸ್ಥಾನದಲ್ಲಿ ಆದ ಬದಲಾವಣೆ ಕಾರಣ ಎಂದು ಹೇಳಿದ್ದಾರೆ.
ಇನ್ನು ಈ ಬಾರಿ ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಂತ ಬರುವಂಥ ತಂಡಗಳು ಯಾವುವು ಎಂಬುದಕ್ಕೆ ಪ್ರಕಾಶ್ ದಳವಿ ಅವರು, ಭಾರತ, ನ್ಯೂಜಿಲ್ಯಾಂಡ್, ದ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎಂದು ಹೇಳಿದ್ದಾರೆ. ಇನ್ನು ಫೈನಲ್ ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿ ಆಗಲಿವೆ. ಅದರಲ್ಲಿ ಭಾರತ ಜಯಿಸುವಂಥ ಅವಕಾಶ ಶೇಕಡಾ ಅರವತ್ತರಷ್ಟು ಇದ್ದರೆ, ದಕ್ಷಿಣ ಆಫ್ರಿಕಾಗೆ ಗೆಲ್ಲುವ ಅವಕಾಶ ಶೇಕಡಾ ನಲವತ್ತರಷ್ಟು ಇದೆ ಎಂದು ಹೇಳಿದ್ದಾರೆ.
ಅಂದ ಹಾಗೆ, ಅಫ್ಗಾನಿಸ್ತಾನ, ನೆದರ್ಲೆಂಡ್ಸ್, ಪಾಕಿಸ್ತಾನ, ಇಂಗ್ಲೆಂಡ್ ಸೇರಿದಂತೆ ಇತರ ಎಲ್ಲ ಕ್ರಿಕೆಟ್ ತಂಡಗಳು ಮತ್ತು ಪ್ರಮುಖ ಆಟಗಾರರ ವಿಚಾರವಾಗಿ ದಳವಿ ಅವರ ಟಾರೋ ಕಾರ್ಡ್ ರೀಡಿಂಗ್ ಶೇಕಡಾ ತೊಂಬತ್ತಕ್ಕೂ ಹೆಚ್ಚು ಪ್ರಮಾಣದಲ್ಲಿ ನಿಜವಾಗಿವೆ. ಇನ್ನು ಆ ಟಾರೋ ಕಾರ್ಡ್ ರೀಡಿಂಗ್ ಬಗ್ಗೆ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದಾಗಿದೆ. ಅದರಲ್ಲೂ ಅಫ್ಗಾನಿಸ್ತಾನ ತಂಡವು ಪ್ರಮುಖ ತಂಡಗಳಿಗೆ ಶಾಕ್ ನೀಡಲಿದೆ ಎಂಬುದಂತೂ ಪರಮಾಶ್ಚರ್ಯ ಎಂಬಂತೆ ಇದೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ, ಇಂಗ್ಲೆಂಡ್ ತಂಡದ ನಾಯಜ ಜೋಸ್ ಬಟ್ಲರ್ ಅದೃಷ್ಟ ಚೆನ್ನಾಗಿಲ್ಲ ಎಂದು ಈ ಬಾರಿಯ ವಿಶ್ವಕಪ್ ಶುರುವಿಗೂ ಮುಂಚೆಯೇ ಪ್ರಕಾಶ್ ದಳವಿ ಅವರು ಹೇಳಿರುವುದು ಅಚ್ಚರಿಗೆ ಕಾರಣ ಆಗಿದೆ.
ಟಾರೋ ಕಾರ್ಡ್ ರೀಡಿಂಗ್ ಎನ್ನುವುದು ವಿವಿಧ ಕಾರ್ಡ್ ಗಳ ಸಹಾಯದಿಂದ ಆಯಾ ತಂಡ ಅಥವಾ ವ್ಯಕ್ತಿಯನ್ನು ನೆನಪಿಸಿಕೊಂಡು, ಕಾರ್ಡ್ ತೆಗೆಯುವುದಾಗಿದೆ. ಕಾರ್ಡ್ ತೆಗೆದ ಮೇಲೆ ಅದರಲ್ಲಿ ಬರುವಂಥದ್ದನ್ನು ನೋಡಿಕೊಂಡು ಏನಾಗಲಿದೆ ಎಂಬುದನ್ನು ಹೇಳಲಾಗುತ್ತದೆ.
ರಾಜಕೀಯ, ಸಿನಿಮಾ, ಯುದ್ಧ, ಷೇರುಪೇಟೆ, ಹೀಗೆ ವಿವಿಧ ವಿಚಾರಗಳ ಬಗ್ಗೆ ತಮ್ಮ ಸ್ವಂತ ಆಸಕ್ತಿಯಿಂದ ಪ್ರಕಾಶ್ ದಳವಿ ಟಾರೋ ಕಾರ್ಡ್ ರೀಡಿಂಗ್ ಮಾಡಿದ್ದಾರೆ. ಎಷ್ಟೋ ಸೆಲೆಬ್ರಿಟಿಗಳ ಬಗ್ಗೆ ಕೂಡ ಅವರು ಟಾರೋ ಕಾರ್ಡ್ ರೀಡಿಂಗ್ ಮಾಡಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ಅವರು ಮಾಡಿರುವಂಥ ಟಾರೋ ಕಾರ್ಡ್ ರೀಡಿಂಗ್ ಹಲವರ ಅಚ್ಚರಿಗೆ ಕಾರಣವಾಗಿದೆ.
(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆಯಾ ಲೇಖಕರದೇ ವಿನಾ ಇದನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಅಂಗಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ ಹಾಗೂ ಅದರ ಸಾಧಕ, ಬಾಧಕಗಳಿಗೆ ಜವಾಬ್ದಾರಿ ಅಲ್ಲ.- ಸಂಪಾದಕರು)
Published On - 5:24 pm, Wed, 25 October 23