ENG vs SL, ICC World Cup: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಇಂಗ್ಲೆಂಡ್-ಶ್ರೀಲಂಕಾ: ಸೋತ ತಂಡದ ಸ್ಥಿತಿ ಏನು?

England vs Sri Lanka, ICC World Cup: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಹಾಗೂ ಕುಸಲ್ ಮೆಂಡೀಸ್ ನೇತೃತ್ವದ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ENG vs SL, ICC World Cup: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಇಂಗ್ಲೆಂಡ್-ಶ್ರೀಲಂಕಾ: ಸೋತ ತಂಡದ ಸ್ಥಿತಿ ಏನು?
ENG vs SL
Follow us
Vinay Bhat
|

Updated on: Oct 26, 2023 | 7:49 AM

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ನಡೆಯಲಿರುವ 25ನೇ ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಹಾಗೂ ಕುಸಲ್ ಮೆಂಡೀಸ್ ನೇತೃತ್ವದ ಶ್ರೀಲಂಕಾ (England vs Sri Lanka) ತಂಡಗಳು ಮುಖಾಮುಖಿ ಆಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವ ಕಾರಣ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಬೆಂಗಳೂರು ಅಭಿಮಾನಿಗಳ ಸಪೋರ್ಟ್ ಯಾರಿಗೆ ಎಂಬುದು ನೋಡಬೇಕಿದೆ.

ಈ ಬಾರಿಯ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ನರು ಇಂಗ್ಲೆಂಡ್ ನೀಡಿರುವ ಪ್ರದರ್ಶನ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಕೇವಲ ಒಂದರಲ್ಲಷ್ಟೆ ಗೆದ್ದಿದೆ. ಸೆಮೀಸ್​ಗೆ ಪ್ರವೇಶಿಸಬೇಕಾದರೆ ಆಂಗ್ಲರಿಗೆ ಉಳಿದ ಎಲ್ಲ ಪಂದ್ಯ ಗೆಲ್ಲಲಬೇಕು. ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬಟ್ಲರ್ ನಾಯಕತ್ವ ಸದ್ದು ಮಾಡುತ್ತಿಲ್ಲ. ಹಿಂದಿನ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಕೇವಲ 170 ರನ್​ಗಳಿಗೆ ಆಲೌಟ್ ಆಗಿತ್ತು. ಬೌಲಿಂಗ್​ನಲ್ಲೂ 399 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಎಲ್ಲ ವಿಭಾಗಗಳಲ್ಲಿ ಆಂಗ್ಲರು ಬಲಿಷ್ಠವಾಗಬೇಕಿದೆ.

Glenn Maxwell: ತೂಫಾನ್ ಶತಕ…ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್​ವೆಲ್

ಇದನ್ನೂ ಓದಿ
Image
ವಿಶ್ರಾಂತಿ ಮುಕ್ತಾಯ: ಲಕ್ನೋದಲ್ಲಿ ಜೊತೆಯಾದ ಟೀಮ್ ಇಂಡಿಯಾ ಆಟಗಾರರು
Image
ಬಲಿಷ್ಠ ಆಂಗ್ಲರನ್ನು ಎದುರಿಸಲು ಲಕ್ನೋಗೆ ಬಂದಿಳಿದ ಟೀಂ ಇಂಡಿಯಾ
Image
ಬೆಂಗಳೂರಿನಲ್ಲಿ ಇಂದು 2ನೇ ವಿಶ್ವಕಪ್ ಪಂದ್ಯ; ಇಂಗ್ಲೆಂಡ್​ಗೆ ಲಂಕಾ ಸವಾಲು
Image
ಇಂಗ್ಲೆಂಡ್- ಲಂಕಾ ಎದುರು ಕಣಕ್ಕಿಳಿಯುವುದಿಲ್ಲ ಹಾರ್ದಿಕ್ ಪಾಂಡ್ಯ..!

ಇತ್ತ ಸಿಂಹಳೀರು ಕೂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ, ಮೂರರಲ್ಲಿ ಸೋಲು ಕಂಡಿದೆ. ಇಂದಿನ ಪಂದ್ಯ ಸೋತರೆ ಟೂರ್ನಮೆಂಟ್​ನಿಂದ ಔಟ್ ಆಗುವುದು ಬಹುತೇಕ ಖಚಿತ. ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೀಲಂಕಾ ವಿಶ್ವಕಪ್​ನಲ್ಲಿ ಮಂಕಾಗಿದೆ. ಜೊತೆಗೆ ದಸುನ್ ಶನಕಾ, ಹಸರಂಗ ಅಂತಹ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆದ್ದಿರುವುದು ಸಮಾಧಾನ ತಂದಿದೆ. ಆದರೂ ಬೌಲಿಂಗ್​ನಲ್ಲಿ ಇನ್ನಷ್ಟು ಸುಧಾರಣೆ ಬೇಕಿದೆ. ಇಂದು ಆಂಗ್ಲರ ವಿರುದ್ಧ ಯಾವರೀತಿ ಪ್ರದರ್ಶನ ತೋರುತ್ತೆ ನೋಡಬೇಕು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗವಾಗಿದ್ದು, ಇಲ್ಲಿ ಆಡಿದ ಕೊನೆಯ ಏಕದಿನ ಪಂದ್ಯದಲ್ಲಿ 367 ರನ್‌ಗಳನ್ನು ಆಸ್ಟ್ರೇಲಿಯಾ ಗಳಿಸಿತ್ತು. ಸ್ಪಿನ್ನರ್‌ಗಳು ಈ ಪಿಚ್‌ನಿಂದ ಸ್ವಲ್ಪ ಸಹಾಯವನ್ನು ಕಂಡುಕೊಳ್ಳಬಹುದಾದರೂ, ಚಿಕ್ಕದಾದ ಗ್ರೌಂಡ್ ಆಗಿರುವುದರಿಂದ ಬೌಂಡರಿಗಳ ಮಳೆ ಸುರಿಯಲಿದೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಬಿಸಿಲಿನ ವಾತಾವರಣ ಇರಲಿದ್ದು 31 ಡಿಗ್ರಿ ಸೆಲ್ಸಿಯಸ್‌ನ ಹೆಚ್ಚಿನ ತಾಪಮಾನ ಇರುವ ನಿರೀಕ್ಷೆಯಿದೆ. ಹೀಗಾಗಿ ಮಳೆಯ ಸಾಧ್ಯತೆ ಇಲ್ಲ.

ಇಂಗ್ಲೆಂಡ್ ತಂಡ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್.

ಶ್ರೀಲಂಕಾ ತಂಡ: ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಕುಸಾಲ್ ಪೆರೇರಾ, ಧನಂಜಯ ಡಿ ಸಿಲ್ವಾ, ಚಾಮಿಕಾ ಕರುಣಾರತ್ನ, ಕಸುನ್ ರಜಿತ, ಲಹಿರು ಕುಮಾರ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ದಿಲ್ಶಾನ್ ಮದುಶಾಂಕ, ಮಥೀಶ ಪತಿರಣ, ಮಹೇಶ ತೀಕ್ಷಣ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ