ವಿಶ್ರಾಂತಿ ಮುಕ್ತಾಯ: ಲಕ್ನೋದಲ್ಲಿ ಜೊತೆಯಾದ ಟೀಮ್ ಇಂಡಿಯಾ ಆಟಗಾರರು
Team India Reached Lucknow: ವಿಶ್ರಾಂತಿಯ ಮೊರೆ ಹೋಗಿದ್ದ ಟೀಮ್ ಇಂಡಿಯಾ ಆಟಗಾರರು ಇದೀಗ ಕ್ಯಾಂಪ್ ಸೇರಿಕೊಂಡಿದ್ದಾರೆ. ಭಾರತ ತಂಡವು ಮುಂಬರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಲಕ್ನೋಗೆ ತಲುಪಿದೆ. ಈ ಪಂದ್ಯ ಅಕ್ಟೋಬರ್ 29 ರಂದು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ.
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC World Cup) ನ್ಯೂಝಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ವಿಶ್ರಾಂತಿಯ ಮೊರೆ ಹೋಗಿದ್ದ ಟೀಮ್ ಇಂಡಿಯಾ ಆಟಗಾರರು ಇದೀಗ ಕ್ಯಾಂಪ್ ಸೇರಿಕೊಂಡಿದ್ದಾರೆ. ಸ್ವಲ್ಪ ವಿಶ್ರಾಂತಿ ಪಡೆದ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೆ ಭಾರತ ತಂಡವು ಮುಂಬರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಲಕ್ನೋಗೆ ತಲುಪಿದೆ. ವಿರಾಟ್ ಕೊಹ್ಲಿ ಅಕ್ಟೋಬರ್ 25 (ಬುಧವಾರ) ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಮಾನದೊಳಗೆ ಕುಳಿತಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಭಾರತ ಈಗಾಗಲೇ ವಿಶ್ವಕಪ್‌ನಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಲಕ್ನೋದಲ್ಲಿ ಮುಂಬರುವ ಭಾರತ-ಇಂಗ್ಲೆಂಡ್ ವಿಶ್ವಕಪ್ ಪಂದ್ಯದಲ್ಲಿ ಮೆನ್ ಇನ್ ಬ್ಲೂ ತಮ್ಮ ಆರನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಈ ಪಂದ್ಯ ಅಕ್ಟೋಬರ್ 29 ರಂದು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೇಪಾಳಕ್ಕೆ ವಾಪಸ್ ಹೊರಟ ವಿದ್ಯಾರ್ಥಿಗಳಿಗೆ ಆಹಾರ ಕೊಟ್ಟು ನೆರವಾದ ಎಬಿವಿಪಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್ ಕಂಪನಿ

Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ

Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
