Emergency landing: ಬೆಳಗಾವಿ ಬಳಿಯ ಹೊಲದಲ್ಲಿ ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದಾಗಿ ತುರ್ತು ಭೂಸ್ಪರ್ಶ, ಪ್ರಾಣಹಾನಿಯಿಲ್ಲ!
ವಿಮಾನದಲ್ಲಿ ಪೈಲಟ್ ಮಾತ್ರ ಇದ್ದರು ಮತ್ತು ಅವರ ಕಾಲಿಗೆ ಮಾತ್ರ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗಾವಿ: ನಗರದ ಸಾಂಬ್ರಾ ಏರ್ಪೋಟ್ ನಿಂದ ಟೇಕಾಫ್ ಆಗಿದ್ದ ವಿಮಾನವೊಂದಕ್ಕೆ ತಾಂತ್ರಿಕ ಸಮಸ್ಯೆ (technical snag) ಎದುರಾಗಿ ಬೆಳಗಾವಿ ತಾಲ್ಲೂಕಿನ ಹೊನ್ನಿನಾಳ ಗ್ರಾಮದಲ್ಲಿ ತುರ್ತು ಭೂಸ್ಪರ್ಶ (emergency landing) ಮಾಡಬೇಕಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ವಿಮಾನದಲ್ಲಿ ಪೈಲಟ್ ಮಾತ್ರ ಇದ್ದರು ಮತ್ತು ಅವರ ಕಾಲಿಗೆ ಮಾತ್ರ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದು ರೆಡ್ ಬರ್ಡ್ ಸಂಸ್ಥೆಗೆ ಸೇರಿದ ವಿಟಿ-ಆರ್ ಬಿ ಎಫ್ ಪುಟ್ಟ ತರಬೇತಿ ವಿಮಾನ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಬೆಳಗಾವಿ ಜಿಲ್ಲಾ ಫೈರ್ ಆಫೀಸರ್ ಶಶಿಧರ್ ನೀಲ್ಗಾರ್ (Shashidhar Neelgar) ಮಾಧ್ಯಮದವರಿಗೆ ನೀಡಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಏರ್ಪೋರ್ಟ್ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ