Video: ಐಇಡಿ ನಿಷ್ಕ್ರಿಯ, ದೀಪಾವಳಿ ಸಮಯದಲ್ಲಿ ತಪ್ಪಿದ ದೊಡ್ಡ ಅನಾಹುತ, ಶೋಪಿಯಾನ್​ನಲ್ಲಿ ಭಯೋತ್ಪಾದಕ ದಾಳಿ ವಿಫಲ

Updated on: Oct 21, 2025 | 7:16 AM

ಶೋಪಿಯಾನ್​ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಲು ಮುಂದಾಗಿದ್ದ ಭಯೋತ್ಪಾದಕರ ದಾಳಿಯನ್ನು ಸೇನೆ ತಡೆದಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಸೋಮವಾರ ಭದ್ರತಾ ಪಡೆಗಳು ಐಇಡಿಯನ್ನು ಸಮಯಕ್ಕೆ ಸರಿಯಾಗಿ ನಿಷ್ಕ್ರಿಯಗೊಳಿಸುವ ಮೂಲಕ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದರು.ಶೋಪಿಯಾನ್‌ನ ಹಫ್ ಪ್ರದೇಶದ ರಸ್ತೆಬದಿಯಲ್ಲಿ ಭಯೋತ್ಪಾದಕರು ಐಇಡಿಯನ್ನು ಇಟ್ಟಿದ್ದರು.ಭದ್ರತಾ ಪಡೆಗಳ ವಾಹನಗಳು ಈ ರಸ್ತೆಯಲ್ಲಿ ಆಗಾಗ ಸಂಚರಿಸುತ್ತವೆ.

ಶ್ರೀನಗರ, ಅಕ್ಟೋಬರ್ 21:  ಶೋಪಿಯಾನ್​ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಲು ಮುಂದಾಗಿದ್ದ ಭಯೋತ್ಪಾದಕರ ದಾಳಿಯನ್ನು ಸೇನೆ ತಡೆದಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಸೋಮವಾರ ಭದ್ರತಾ ಪಡೆಗಳು ಐಇಡಿಯನ್ನು ಸಮಯಕ್ಕೆ ಸರಿಯಾಗಿ ನಿಷ್ಕ್ರಿಯಗೊಳಿಸುವ ಮೂಲಕ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದರು.

ಶೋಪಿಯಾನ್‌ನ ಹಫ್ ಪ್ರದೇಶದ ರಸ್ತೆಬದಿಯಲ್ಲಿ ಭಯೋತ್ಪಾದಕರು ಐಇಡಿಯನ್ನು ಇಟ್ಟಿದ್ದರು.ಭದ್ರತಾ ಪಡೆಗಳ ವಾಹನಗಳು ಈ ರಸ್ತೆಯಲ್ಲಿ ಆಗಾಗ ಸಂಚರಿಸುತ್ತವೆ. ಐಇಡಿ ಪತ್ತೆಯಾದ ನಂತರ, ಭದ್ರತಾ ಪಡೆಗಳು ರಸ್ತೆಯನ್ನು ಸಂಚಾರಕ್ಕೆ ನಿರ್ಬಂಧಿಸಿ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿದರು. ತಂಡವು ನಿಯಂತ್ರಿತ ಸ್ಫೋಟದ ಮೂಲಕ ಐಇಡಿಯನ್ನು ನಾಶಪಡಿಸಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Oct 21, 2025 07:14 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More