Daily Devotional: ಕವಡೆ ಇಟ್ಟುಕೊಳ್ಳುವುದರಿಂದ ಏನೇನು ಲಾಭ ತಿಳಿಯಿರಿ
ಡಾ. ಬಸವರಾಜ ಗುರೂಜಿ ಅವರು ಕವಡೆಗಳ ಧಾರ್ಮಿಕ ಮಹತ್ವವನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಕವಡೆಗಳನ್ನು ಹಿಂದೂ ಸಂಸ್ಕೃತಿಯಲ್ಲಿ ಹೇಗೆ ಬಳಸಲಾಗುತ್ತದೆ ಮತ್ತು ಅವುಗಳಿಂದಾಗುವ ಪ್ರಯೋಜನಗಳನ್ನು ತಿಳಿಸಲಾಗಿದೆ. ನವಗ್ರಹಗಳ ಪ್ರತಿಕವಾಗಿ, ಸಂಪತ್ತು ಮತ್ತು ಯಶಸ್ಸಿಗೆ, ಹಾಗೂ ಅನಾರೋಗ್ಯ ಮತ್ತು ದೃಷ್ಟಿದೋಷ ನಿವಾರಣೆಗೆ ಕವಡೆಗಳನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸಲಾಗಿದೆ.
ಬೆಂಗಳೂರು, ಆಗಸ್ಟ್ 22: ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿಯಲ್ಲಿ ಕವಡೆಗಳು ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಒಂಬತ್ತು ಕವಡೆಗಳು ನವಗ್ರಹಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕವಡೆಗಳನ್ನು ಇಡುವುದರಿಂದ ಸಂಪತ್ತು ಮತ್ತು ಯಶಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಅನಾರೋಗ್ಯದಿಂದ ಬಳಲುವವರು ಎರಡು ಕವಡೆಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಶುಭವಾಗುತ್ತದೆ ಎನ್ನಲಾಗುತ್ತದೆ.