Daily Devotional: ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?

Updated on: May 08, 2026 | 6:48 AM

ಕೊಬ್ಬರಿ ಎಣ್ಣೆ ದೀಪ ಹಚ್ಚುವುದರ ಹಿಂದೆ ಏನೆಲ್ಲಾ ಲಾಭವಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಧರ್ಮದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ, ಅದರಲ್ಲೂ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕೊಬ್ಬರಿ ಎಣ್ಣೆ ದೀಪವನ್ನು ಮಹಾಲಕ್ಷ್ಮಿಯ ಮುಂದೆ ಹಚ್ಚಿ, ಸಕ್ಕರೆ ಮತ್ತು ತೆಂಗಿನಕಾಯಿ ನೈವೇದ್ಯ ಮಾಡುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ಶೀಘ್ರವಾಗಿ ನೆರವೇರುತ್ತವೆ ಮತ್ತು ಲಕ್ಷ್ಮಿಯ ಅನುಗ್ರಹ ಲಭಿಸುತ್ತದೆ. ಕುಲದೇವತೆಯ ಮುಂದೆ ಅಖಂಡವಾಗಿ ಮೂರು ದಿನ ಈ ದೀಪ ಹಚ್ಚಿದರೆ ಕೌಟುಂಬಿಕ ಕಲಹಗಳು ದೂರವಾಗಿ ಸುಖ-ಸಮೃದ್ಧಿ ನೆಲೆಸುತ್ತದೆ.

ಅರಳಿ ಮರದ ಬಳಿ ಹಚ್ಚುವುದರಿಂದ ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ ಮತ್ತು ಈಶಾನ್ಯ ಮೂಲೆಯಲ್ಲಿ 48 ಗಂಟೆಗಳ ಕಾಲ ಸತತವಾಗಿ ಹಚ್ಚಿದರೆ ಸಾಲಬಾಧೆಯಿಂದ ಮುಕ್ತಿ ಪಡೆಯಬಹುದು. ಶನಿವಾರ ವೆಂಕಟೇಶ್ವರ ಸ್ವಾಮಿ ಹಾಗೂ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಈ ದೀಪಾರಾಧನೆ ಮಾಡುವುದರಿಂದ ಕಾನೂನು ಸಮಸ್ಯೆಗಳು ಮತ್ತು ಸಂತಾನ ದೋಷಗಳು ನಿವಾರಣೆಯಾಗುತ್ತವೆ. ವಾರಕ್ಕೊಮ್ಮೆ ಈ ದೀಪ ಹಚ್ಚುವುದು ನಿಮ್ಮ ಜೀವನದ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಸಹಕಾರಿ ಎಂದು ಗುರೂಜಿ ವಿವರಿಸಿದ್ದಾರೆ.

Follow Us