Video: ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಬೆಳ್ಳಿ, ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ

|

Updated on: Aug 27, 2024 | 4:46 PM

ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ದೇವಾಲಯದ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಗರ್ಭಗುಡಿಯೊಳಗೆ ಬಂದ ಕಳ್ಳ ಆಂಜನೇಯನಿಗೆ ಕೈ ಮುಗಿದು, ಕ್ಷಮೆ ಯಾಚಿಸಿ ಬಳಿಕ ಕಳ್ಳತನ ಮಾಡಿರುವುದನ್ನು ಕಾಣಬಹುದು.

ಮಧ್ಯಪ್ರದೇಶ: ಆಂಜನೇಯ ಸ್ವಾಮಿಯ ದೇವಾಲಯದೊಳಗೆ ನುಗ್ಗಿ ಮೂರ್ತಿಯನ್ನು ಅಲಂಕರಿಸಿದ್ದ ಬೆಳ್ಳಿ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಗುನಾ ಪ್ರದೇಶದಲ್ಲಿ ನಡೆದಿದೆ. ಸ್ವಾರಸ್ಯಕರ ವಿಷಯವೇನೆಂದರೆ ಕಳ್ಳ ಚಿನ್ನಾಭರಣ ದೋಚುವ ಮೊದಲು ಆಂಜನೇಯನಿಗೆ ಕೈ ಮುಗಿದು, ಕ್ಷಮೆ ಯಾಚಿಸಿ ಬಳಿಕ ಕಳ್ಳತನ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ದೇವಾಲಯದ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ