Video: ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ, ಮೂವರು ಸಾವು

Updated on: Dec 20, 2025 | 10:26 AM

ತೈವಾನ್​ನಲ್ಲಿ ವ್ಯಕ್ತಿಯೊಬ್ಬ ತೈಪೆ ರೈಲು ನಿಲ್ದಾಣದ ಬಳಿ ಜನರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಶಂಕಿತನು ಮೊದಲು ತೈಪೆಯ ಮುಖ್ಯ ರೈಲು ನಿಲ್ದಾಣದ ಬಳಿ ಸ್ಮೋಕ್ ಬಾಂಬ್ ಎಸೆದಿದ್ದ.ಇದು ಪ್ರಯಾಣಿಕರಲ್ಲಿ ಭಯವನ್ನು ಉಂಟುಮಾಡಿತು. ಜನರು ಆ ಪ್ರದೇಶದಿಂದ ಓಡಿ ಹೋಗಲು ಮುಂದಾದಾಗ ಆತ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಪೊಲೀಸರು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ತೈಪೆ, ಡಿಸೆಂಬರ್ 20: ತೈವಾನ್​ನಲ್ಲಿ ವ್ಯಕ್ತಿಯೊಬ್ಬ ತೈಪೆ ರೈಲು ನಿಲ್ದಾಣದ ಬಳಿ ಜನರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಶಂಕಿತನು ಮೊದಲು ತೈಪೆಯ ಮುಖ್ಯ ರೈಲು ನಿಲ್ದಾಣದ ಬಳಿ ಸ್ಮೋಕ್ ಬಾಂಬ್ ಎಸೆದಿದ್ದ.ಇದು ಪ್ರಯಾಣಿಕರಲ್ಲಿ ಭಯವನ್ನು ಉಂಟುಮಾಡಿತು. ಜನರು ಆ ಪ್ರದೇಶದಿಂದ ಓಡಿ ಹೋಗಲು ಮುಂದಾದಾಗ ಆತ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಪೊಲೀಸರು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಆ ವ್ಯಕ್ತಿ ಕಟ್ಟಡದ ಮೇಲಿನ ಮಹಡಿಯಿಂದ ಕೆಳಗೆ ಬಿದ್ದಿದ್ದು ಗಂಭೀರ ಗಾಯಗಳಾಗಿತ್ತು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತನ ಒಬ್ಬನೇ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದು, ಇಲ್ಲಿಯವರೆಗೆ ಯಾವ ಸಹಚರನೂ ಪತ್ತೆಯಾಗಿಲ್ಲ. ದಾಳಿ ಮಾತ್ರ ಭಯಾನಕವಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ