ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Jul 28, 2026 | 6:16 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಜುಲೈ 28, 2026ರ ಮಂಗಳವಾರದ ದ್ವಾದಶ ರಾಶಿಗಳ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ. ಗ್ರಹಗಳ ಸ್ಥಾನ, ಶುಭ-ರಾಹುಕಾಲ, ಅದೃಷ್ಟದ ಬಣ್ಣ, ಸಂಖ್ಯೆ, ದಿಕ್ಕು ಹಾಗೂ ಪ್ರತಿಯೊಂದು ರಾಶಿಯವರಿಗೆ ನಿರ್ದಿಷ್ಟ ಮಂತ್ರಗಳೊಂದಿಗೆ ವೃತ್ತಿ, ಆರ್ಥಿಕ, ಕೌಟುಂಬಿಕ ಮತ್ತು ಆರೋಗ್ಯ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ಇಂದು 2026ರ ಜುಲೈ 28, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ಶುಕ್ಲ ಪಕ್ಷದ ಚತುರ್ದಶಿ, ಪೂರ್ವಾಷಾಢ ನಕ್ಷತ್ರ ಆಗಿದ್ದು, ರಾಹುಕಾಲವು ಮಧ್ಯಾಹ್ನ 3:35 ರಿಂದ ಸಂಜೆ 5:10 ರವರೆಗೆ ಇರುತ್ತದೆ. ಶುಭಕಾಲವು ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 12:26 ರವರೆಗೆ ಇರುತ್ತದೆ. ಈ ದಿನ ಸುಬ್ರಮಣ್ಯ ಮತ್ತು ಹನುಮನ ಆರಾಧನೆಗೆ ವಿಶೇಷ ಮಹತ್ವವಿದೆ. ಕುಜ ದೋಷ, ಸಂತಾನ ಸಮಸ್ಯೆಗಳು, ಕಣ್ಣು ಮತ್ತು ಚರ್ಮದ ಸಮಸ್ಯೆಗಳಿಗೆ ಈ ದಿನದ ಆರಾಧನೆ ಪರಿಹಾರ ನೀಡುತ್ತದೆ. ನಾಳೆ ಗುರು ಪೌರ್ಣಿಮಾ ಇರುವ ಕಾರಣ, ಇಂದು ಸಂಕಲ್ಪ ಕೈಗೊಳ್ಳಲು ಉತ್ತಮ ದಿನವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದು, ಮೇಷಾದಿ 12 ರಾಶಿಗಳ ದಿನ ಭವಿಷ್ಯವನ್ನು ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More