Video: ಕಿರಿದಾದ ರಸ್ತೆಯಲ್ಲಿ ಚಾಲಕರ ಆಲೋಚನೆ ದೊಡ್ಡದಿರಲಿ

Updated on: Jun 30, 2025 | 9:28 AM

ರಸ್ತೆ ಸಣ್ಣದಾಗಿರುವಾಗ ನಿಮ್ಮ ಆಲೋಚನೆ ಸ್ವಲ್ಪ ದೊಡ್ಡದಾಗಿರಬೇಕು, ಜತೆಗೆ ಶಾಂತಿಯಿಂದ ವರ್ತಿಸಿದರೆ ಸಮಸ್ಯೆ ಬಹುಬೇಗ ಬಗೆಹರಿಯುತ್ತದೆ. ಅಲ್ಲೂ ನಿಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಯೇ ವಿಡಿಯೋವೊಂದು ವೈರಲ್ ಆಗಿದ್ದು, ಯಾವ ಪ್ರದೇಶದಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಕಿರಿದಾದ ದಾರಿಯಲ್ಲಿಕಾರು ಚಾಲಕ ಹೋಗುವಾಗ ಎದುರಿನಿಂದಲೂ ಕಾರೊಂದು ಅಡ್ಡ ಬಂದಿದೆ. ಹೇಗೋ ನಿಧಾನವಾಗಿ ಎರಡೂ ವಾಹನವು ಒಂದಕ್ಕೊಂದು ಡಿಕ್ಕಿ ಹೊಡೆಯದೆ ಹೋಗಬೇಕು ಎನ್ನುವವಷ್ಟರಲ್ಲಿ ಎದುರಿನಿಂದ ಮತ್ತೊಂದು ಕಾರು ವೇಗವಾಗಿ ಬಂದು ಬೈಕ್​ ಚಾಲಕ ಹಾಗೂ ಎದುರಿನ ಕಾರಿಗೆ ಡಿಕ್ಕಿ ಹೊಡೆದಿದೆ.

ರಸ್ತೆ ಸಣ್ಣದಾಗಿರುವಾಗ ನಿಮ್ಮ ಆಲೋಚನೆ ಸ್ವಲ್ಪ ದೊಡ್ಡದಾಗಿರಬೇಕು, ಜತೆಗೆ ಶಾಂತಿಯಿಂದ ವರ್ತಿಸಿದರೆ ಸಮಸ್ಯೆ ಬಹುಬೇಗ ಬಗೆಹರಿಯುತ್ತದೆ. ಅಲ್ಲೂ ನಿಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಯೇ ವಿಡಿಯೋವೊಂದು ವೈರಲ್ ಆಗಿದ್ದು, ಯಾವ ಪ್ರದೇಶದಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಕಿರಿದಾದ ದಾರಿಯಲ್ಲಿ ಕಾರು ಚಾಲಕ ಹೋಗುವಾಗ ಎದುರಿನಿಂದಲೂ ಕಾರೊಂದು ಅಡ್ಡ ಬಂದಿದೆ. ಹೇಗೋ ನಿಧಾನವಾಗಿ ಎರಡೂ ವಾಹನವು ಒಂದಕ್ಕೊಂದು ಡಿಕ್ಕಿ ಹೊಡೆಯದೆ ಹೋಗಬೇಕು ಎನ್ನುವವಷ್ಟರಲ್ಲಿ ಎದುರಿನಿಂದ ಮತ್ತೊಂದು ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಕಾರಿನ ಜತೆಗೆ ಬೈಕ್​ ಚಾಲಕನಿಗೂ ಹಾನಿಯಾಗಿದೆ. ಕೇವಲ ಒಂದೇ ಒಂದು ನಿಮಿಷ ತಡೆದಿದ್ದರೂ ಈ ಅಪಘಾತ ತಡೆಯಬಹುದಿತ್ತು. ಹಾಗೆಯೇ ಬೈಕ್ ಚಾಲಕನಿಗೂ ತನ್ನ ತಪ್ಪಿನ ಅರಿವಾಗಿದೆ.  ಹಾಗಾಗಿ ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲ ಎಂದಾದಾಗ ಅವಸರ ಮಾಡಿ ಅಪಘಾತ ತಂದುಕೊಳ್ಳಬಾರದು ಎಂಬುದು ಆಶಯ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More