Budget Session: ರೈತ ನಾಯಕನ ಮಗ ದರ್ಶನ್ ಪುಟ್ಟಣ್ಣಯ್ಯ ತಂದೆಯ ಖ್ಯಾತಿಗನುಗುಣವಾಗಿ ಸದನದಲ್ಲಿ ರೈತರ ಸಮಸ್ಯೆ ಪ್ರಸ್ತಾಪಿಸಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jul 05, 2023 | 7:06 PM

ಎಣ್ಣೆ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ವಿದೇಶಿ ಮೂಲದ ಕಂಪನಿಗಳಿಂದ ಮತ್ತು ಕೃಷಿ ಉದ್ಯಮಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದು ದರ್ಶನ್ ಹೇಳಿದರು.

ಬೆಂಗಳೂರು: ದರ್ಶನ್ ಪುಟ್ಟಣ್ಣಯ್ಯ (darshan Puttannaiah) ಒಬ್ಬ ರೈತನಾಯಕನ ಮಗ ಮತ್ತು ತಮ್ಮ ದಿವಂಗತ ತಂದೆ ಕೆಎಸ್ ಪುಟ್ಟಣ್ಣಯ್ಯರ (KS Puttannaiah) ವರ್ಚಸ್ಸು ಮತ್ತು ಖ್ಯಾತಿಗೆ ತಕ್ಕಂತೆ ಇಂದು ವಿಧಾನ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದರು. ಖಾದ್ಯತೈಲ (edible oil) ಅದರಲ್ಲೂ ನಿರ್ದಿಷ್ಟವಾಗಿ ತಾಳೆ ಎಣ್ಣೆ ಬಗ್ಗೆ ಮಾತಾಡಿದ ಅವರು, ಎಣ್ಣೆ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ವಿದೇಶಿ ಮೂಲದ ಕಂಪನಿಗಳಿಂದ ಮತ್ತು ಕೃಷಿ ಉದ್ಯಮಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದರು. ಖಾದ್ಯ ತೈಲಗಳ ಮೇಲೆ ಆಮದು ಶುಲ್ಕ ಕಡಿಮೆ ಇರೋದ್ರಿಂದ ಉದ್ಯಮಿಗಳು ಸುಮಾರು ರೂ. 70,000 ಕೋಟಿ ಮೌಲ್ಯದಷ್ಟು ಖಾದ್ಯ ಎಣ್ಣೆಗಳನ್ನು ಹೊರದೇಶಗಳಿಂದ ಅಮದು ಮಾಡಿಕೊಳ್ಳುತ್ತಿದ್ದಾರೆ ಎಂದು ದರ್ಶನ್ ಹೇಳಿದರು. ದೇಶದಲ್ಲಿ ಉತ್ಪನ್ನವಾಗುವ ಎಣ್ಣೆಗಳಿಗೆ ಬೇಡಿಕೆ ಸೃಷ್ಟಿಸಿದರೆ ಆಮದು ಪೀಡೆಯನ್ನು ತಪ್ಪಿಸಬಹುದು ಎಂದು ಹೇಳಿದ ಅವರು ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.