Daily Devotional: ಮನೆಯಲ್ಲಿ ನಿತ್ಯ ಜಗಳಕ್ಕೆ ಇದೇ ಕಾರಣ

|

Updated on: Mar 19, 2024 | 6:55 AM

ಕೆಲವೊಮ್ಮೆ ಎಲ್ಲವೂ ಸರಿ ಇದೆ ಎಂದೆನಿಸುವಾಗ, ಮನೆಯಲ್ಲಿ ಆಗಾಗ್ಗೆ ವಿರಸ ಮತ್ತು ಸಂಕಟದ ವಾತಾವರಣ ನಿರ್ಮಾಣವಾಗುತ್ತದೆ. ಮನೆಯಲ್ಲಿ ನಿತ್ಯ ಈ ಜಗಳಗಳು ಕೆಲವೊಮ್ಮೆ ಮನೆ ಒಡೆಯುವಂತೆ ಮಾಡುತ್ತವೆ. ಹಾಗಾದರೆ ಮನೆಯಲ್ಲಿನ ನಿತ್ಯ ಜಗಳವನ್ನು ತಪ್ಪಿಸಲು ಏನು ಮಾಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ಮನೆಯೆ ಮಂತ್ರಾಲಯ ಮನಸ್ಸೆ ದೇವಾಲಯ ಎಂಬ ಮಾತಿದೆ. ಮನೆಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಇದ್ದರೆ ಬಹಳ ಚೆನ್ನಾಗಿರುತ್ತದೆ. ಸಂಸಾರದಲ್ಲಿ ಸರಸ-ವಿರಸ ಸಮಾನವಾಗಿರಬೇಕು. ಮನೆ ಅಂದ ಮೇಲೆ ಅಲ್ಲಿ ಸಂತೋಷ, ಕೋಪ, ತಾಪ ಹಾಗೂ ಜಗಳ ಇದ್ದೇ ಇರುತ್ತದೆ. ಸಂಸಾರದಲ್ಲಿ ಜಗಳ ಆಗಾಗ ಆಗುತ್ತಿರುಬೇಕು. ಆದರೆ ನಿತ್ಯ ಬೆಳಿಗ್ಗೆ ಎದ್ದ ತಕ್ಷಣದಿಂದಲೇ ಜಗಳ ಆರಂಭವೆಂದರೆ ಅಲ್ಲಿ ಸುಖ ಸಂಸಾರವಿರುವುದಿಲ್ಲ. ಸಂಸಾರಕ್ಕಿಂತ ದೊಡ್ಡ ಸುಖ ಜಗತ್ತಿನಲ್ಲಿ ಇಲ್ಲ. ಮನುಷ್ಯ ಯಾವಾಗಲೂ ತನ್ನ ಸಮಸ್ಯೆಗಳೊಂದಿಗೆ, ದಣಿದು, ಅಸಮಾಧಾನಗೊಂಡು ಮನೆಗೆ ಬರುತ್ತಾನೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೊಂದಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿ ಇದೆ ಎಂದೆನಿಸುವಾಗ, ಮನೆಯಲ್ಲಿ ಆಗಾಗ್ಗೆ ವಿರಸ ಮತ್ತು ಸಂಕಟದ ವಾತಾವರಣ ನಿರ್ಮಾಣವಾಗುತ್ತದೆ. ಮನೆಯಲ್ಲಿ ನಿತ್ಯ ಈ ಜಗಳಗಳು ಕೆಲವೊಮ್ಮೆ ಮನೆ ಒಡೆಯುವಂತೆ ಮಾಡುತ್ತವೆ. ಹಾಗಾದರೆ ಮನೆಯಲ್ಲಿನ ನಿತ್ಯ ಜಗಳವನ್ನು ತಪ್ಪಿಸಲು ಏನು ಮಾಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..