TV9 Education Summit 2025: ಟಿವಿ9 ಶಿಕ್ಷಣ ಮೇಳಕ್ಕೆ ಸಖತ್ ಸ್ಪಂದನೆ; ನೋಡಿ ಡ್ರೋನ್ ದೃಶ್ಯ

Updated on: Apr 06, 2025 | 4:16 PM

Drone visuals of TV9 Education Summit 2025: ಟಿವಿ9 ಕನ್ನಡ ಆಯೋಜಿಸಿದ ಮೂರು ದಿನಗಳ (ಏ. 4-6) ಎಜುಕೇಶನ್ ಎಕ್ಸ್​​ಪೋ 2025 ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಉತ್ತಮ ಸ್ಪಂದನೆ ಸಿಕ್ಕಿದೆ. ಮೊನ್ನೆ ಶುಕ್ರವಾರ ಆರಂಭವಾದ ಈ ಅಮೋಘ ಶಿಕ್ಷಣ ಮೇಳ ಮೂರು ದಿನಗಳ ಕಾಲ ನಡೆದಿದ್ದು, ಇವತ್ತು ಸಮಾಪ್ತಿಗೊಳ್ಳುತ್ತಿದೆ. ಪ್ಯಾಲೇಸ್ ಗ್ರೌಂಡ್​​ನಲ್ಲಿ ಆಯೋಜಿಸಲಾದ ಈ ಎಜುಕೇಶನ್ ಸಮಿಟ್​​ನ ಕೊನೆಯ ದಿನವಾದ ಇಂದು ಭಾನುವಾರ, ನೂರಾರು ಮಂದಿ ಭೇಟಿ ನೀಡಿದ್ದಾರೆ. ಶಿಕ್ಷಣ ಸಂಬಂಧಿತ ಎಲ್ಲಾ ಮಾಹಿತಿಯು ಒಂದೇ ವೇದಿಕೆಯಲ್ಲಿ ಅಡಕವಾಗಿತ್ತು.

ಬೆಂಗಳೂರು, ಏಪ್ರಿಲ್ 6: ಟಿವಿ9 ಕನ್ನಡ ಆಯೋಜಿಸಿದ ಮೂರು ದಿನಗಳ ಎಜುಕೇಶನ್ ಎಕ್ಸ್​​ಪೋ 2025 (TV9 Education Summit 2025) ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಉತ್ತಮ ಸ್ಪಂದನೆ ಸಿಕ್ಕಿದೆ. ಮೊನ್ನೆ ಶುಕ್ರವಾರ ಆರಂಭವಾದ ಈ ಅಮೋಘ ಶಿಕ್ಷಣ ಮೇಳ ಮೂರು ದಿನಗಳ ಕಾಲ ನಡೆದಿದ್ದು, ಇವತ್ತು ಸಮಾಪ್ತಿಗೊಳ್ಳುತ್ತಿದೆ. ಪ್ಯಾಲೇಸ್ ಗ್ರೌಂಡ್​​ನಲ್ಲಿ ಆಯೋಜಿಸಲಾದ ಈ ಎಜುಕೇಶನ್ ಸಮಿಟ್​​ನ ಕೊನೆಯ ದಿನವಾದ ಇಂದು ಭಾನುವಾರ, ನೂರಾರು ಮಂದಿ ಭೇಟಿ ನೀಡಿದ್ದಾರೆ. ಶಿಕ್ಷಣ ಸಂಬಂಧಿತ ಎಲ್ಲಾ ಮಾಹಿತಿಯು ಒಂದೇ ವೇದಿಕೆಯಲ್ಲಿ ಅಡಕವಾಗಿತ್ತು. ದ್ವಿತೀಯ ಪಿಯುಸಿ ಬಳಿಕ ಲಭ್ಯ ಇರುವ ಕೋರ್ಸ್​​ಗಳು, ಕಾಲೇಜುಗಳ ಮಾಹಿತಿ ಸಿಗುತ್ತದೆ. ಈ ಶಿಕ್ಷಣ ಮೇಳದಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರ ದೃಶ್ಯವನ್ನು ಡ್ರೋನ್​​ನಲ್ಲಿ ಸೆರೆ ಹಿಡಿಯಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More