ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ 2023ಗೆ ಚಾಲನೆ, ನಾಯಂಡಹಳ್ಳಿಯ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದಿನಿಂದ 3-ದಿನದ ಮೇಳ!

ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2023 | 12:28 PM

ಎಕ್ಸ್​ಪೋನಲ್ಲಿ 50 ಕ್ಕೂ ಹೆಚ್ಚು ಬಿಲ್ಡರ್ಸ್ ಮತ್ತು ಡೆವಲಪರ್ಸ್, ಇಂಟಿರಿಯರ್ಸ್, ಗೃಹಸಾಲ ನೀಡುವ ಕಂಪನಿಗಳು ಭಾಗಿಯಾಗಿವೆ. ಎಕ್ಸ್​ಪೋದ ಮೊದಲ ದಿನವೇ ಅದಕ್ಕೆ ಸ್ಟಾರ್ ವ್ಯಾಲ್ಯೂ ಒದಗಿ ಬಂದಿದ್ದು ವಿಶೇಷ. ಖ್ಯಾತ ನಟ ಕೋಮಲ್, ನಟಿಯರಾದ ಚಂದ್ರಲೇಖಾ, ಶರಣ್ಯ ಶೆಟ್ಟಿ ಆಗಮಿಸಿದ್ದನ್ನು ನೋಡಬಹುದು.

ಬೆಂಗಳೂರು: ಟಿವಿ9 ಕನ್ನಡ ವಾಹಿನಿ ನಿಯಮಿತವಾಗಿ ನಡೆಸುವ ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನಿಚರ್ ಎಕ್ಸ್ ಪೋ (ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ) (Tv9 Sweet Home Expo 2023) 14ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಇಂದಿನಿಂದ 3 ದಿನಗಳ ಕಾಲ (ಸೆಪ್ಟೆಂಬರ್ 8 ರಿಂದ 10) ಎಕ್ಸ್ ಪೋ ಅನ್ನು ಈ ಬಾರಿ ನಗರದ ನಾಯಂಡಹಳ್ಳಿಯಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ (Nandi Links Grounds) ಆಯೋಜಿಸಲಾಗುತ್ತಿದೆ. ಎಕ್ಸ್ ಪೋನಲ್ಲಿ 50 ಕ್ಕೂ ಹೆಚ್ಚು ಬಿಲ್ಡರ್ಸ್ ಮತ್ತು ಡೆವಲಪರ್ಸ್ (Builders and Developers), ಇಂಟಿರಿಯರ್ಸ್, ಗೃಹಸಾಲ ನೀಡುವ ಕಂಪನಿಗಳು ಭಾಗಿಯಾಗಿವೆ. ಎಕ್ಸ್ ಪೋದ ಮೊದಲ ದಿನವೇ ಅದಕ್ಕೆ ಸ್ಟಾರ್ ವ್ಯಾಲ್ಯೂ ಒದಗಿ ಬಂದಿದ್ದು ವಿಶೇಷ. ಖ್ಯಾತ ನಟ ಕೋಮಲ್, ನಟಿಯರಾದ ಚಂದ್ರಲೇಖಾ, ಶರಣ್ಯ ಶೆಟ್ಟಿ ಆಗಮಿಸಿದ್ದನ್ನು ನೋಡಬಹುದು. ಕೋಮಲ್  ಮೇಳವನ್ನು ಉದ್ಘಾಟಿಸಿದರು. ಟಿವಿ9 ಕನ್ನಡ ವಾಹಿನಿಯ ಹಿರಿಯ ವೈಸ್ ಪ್ರೆಸಿಡೆಂಟ್ ನೋಬೆಲ್ ಜಯಕರ್ ದೀಪ ಬೆಳಗುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 08, 2023 12:27 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.